ಹೊಸದಿಗಂತ ಡಿಜಿಟಲ್ ಡೆಸ್ಕ್:
ದುನಿಯಾ ವಿಜಯ್ ಅಭಿನಯದ ಭೀಮ ಹಾಗೂ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾಗಳು ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲದೆ ತಮಿಳುನಾಡಿನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿವೆ.
ಆಗಸ್ಟ್ 9ಕ್ಕೆ ತೆರೆಕಂಡ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ‘ಭೀಮ’ ಸಿನಿಮಾ ಸಖತ್ ಕಲೆಕ್ಷನ್ ಮಾಡುತ್ತಿದೆ. ಮೊದಲ ವಾರವೇ ಸಿನಿಮಾ ಕಲೆಕ್ಷನ್ 15 ಕೋಟಿ ರೂ. ದಾಟಿತ್ತು. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಬಂದ ‘ಕೃಷ್ಣಂ ಪ್ರಣಯ ಸಖಿ’ ಕೂಡ ಫ್ಯಾಮಿಲಿ ಆಡಿಯನ್ಸ್‌ನ ಸೆಳೆಯುತ್ತಿದೆ. ವೀಕೆಂಡ್‌ನಲ್ಲಿ ಸಿನಿಮಾ ಕೆಲವೆಡೆ ಹೌಸ್‌ಫುಲ್ ಪ್ರದರ್ಶನ ಕಂಡಿದೆ. 4 ದಿನಕ್ಕೆ 6 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಸದ್ದು ಮಾಡುತ್ತಿದೆ.
ಕರ್ನಾಟಕ ಮಾತ್ರವಲ್ಲದೇ ತಮಿಳುನಾಡಿನಲ್ಲೂ ‘ಭೀಮ’ ಹಾಗೂ ‘ಕೃಷ್ಣಂ ಪ್ರಣಯಸಖಿ’ ಸಿನಿಮಾಗಳು ಯಶಸ್ವಿ ಪ್ರದರ್ಶನ ಕಾಣುತ್ತಿವೆ ಎಂದು ವರದಿಯಾಗಿದೆ. ಕರ್ನಾಟಕದ ಗಡಿಯ ಹೊಸೂರಿನ ‘ಗ್ರ್ಯಾಂಡ್ ಸಿನಿಮಾಸ್’ ಚಿತ್ರಮಂದಿರದಲ್ಲಿ ಬೇಡಿಕೆಗೆ ತಕ್ಕಂತೆ ಕನ್ನಡ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಹಿಂದೆ ದರ್ಶನ್ ನಟೆಯ ‘ಕಾಟೇರ’ ಚಿತ್ರ ಕೂಡ ಅಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಇದೀಗ ‘ಭೀಮ’, ‘ಕೃಷ್ಣಂ ಪ್ರಣಯಸಖಿ’ ಚಿತ್ರಗಳು ಅಲ್ಲಿ ಹೌಸ್‌ಫುಲ್ ಆಗುತ್ತಿದೆ.