August 19, 2026
Wednesday, August 19, 2026
spot_img

ನಿಮ್ಮ ಕಣ್ಣುಗಳಿಂದ ನಿರಂತರವಾಗಿ ನೀರು ಬರುತ್ತಿದೆಯೇ? ಇದಕ್ಕೆ ಅಸಲಿ ಕಾರಣಗಳೇನು ಗೊತ್ತೇ?

ಕಣ್ಣುಗಳು ನಮ್ಮ ದೇಹದ ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖ ಅಂಗಗಳಲ್ಲಿ ಒಂದಾಗಿವೆ. ಹಲವು ಬಾರಿಗೆ ಯಾವುದೇ ಕಾರಣವಿಲ್ಲದೆ ಅಥವಾ ಸಣ್ಣಪುಟ್ಟ ಕಿರಿಕಿರಿಯಿಂದ ಕಣ್ಣುಗಳಿಂದ ನೀರು ಬರುವುದು ಸಾಮಾನ್ಯ. ಆದರೆ ಈ ಸಮಸ್ಯೆ ಪದೇಪದೇ ಮರುಕಳಿಸುತ್ತಿದ್ದರೆ, ಅದನ್ನು ನಿರ್ಲಕ್ಷಿಸದೆ ಸೂಕ್ತ ಕಾರಣವನ್ನು ತಿಳಿದುಕೊಳ್ಳುವುದು ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ.

ಕಣ್ಣುಗಳಿಂದ ನೀರು ಬರಲು ಪ್ರಮುಖ ಕಾರಣಗಳು

  • ಡ್ರೈ ಐ ಸಿಂಡ್ರೋಮ್: ಕಣ್ಣುಗಳಲ್ಲಿ ತೇವಾಂಶ ಕಡಿಮೆಯಾದಾಗ, ಕಣ್ಣಿನ ಗುಡ್ಡೆಯನ್ನು ರಕ್ಷಿಸಲು ನಮ್ಮ ಮೆದುಳು ಹೆಚ್ಚುವರಿ ನೀರನ್ನು ಉತ್ಪಾದಿಸಲು ಗ್ರಂಥಿಗಳಿಗೆ ಸೂಚನೆ ನೀಡುತ್ತದೆ. ಇದರಿಂದ ಕಣ್ಣುಗಳಿಂದ ನೀರು ಹೊರಬರುತ್ತದೆ.
  • ಅಲರ್ಜಿ ಮತ್ತು ಸೋಂಕುಗಳು: ಧೂಳು, ಹೊಗೆ, ಪರಾಗಸ್ಪರ್ಶ ಅಥವಾ ರಾಸಾಯನಿಕಗಳಿಗೆ ಕಣ್ಣು ಒಡ್ಡಿಕೊಂಡಾಗ ಅಲರ್ಜಿಯಾಗಿ ನೀರು ಬರಬಹುದು. ಅಲ್ಲದೆ, ‘ಆಂಕಾಂಜಿಕ್ಟಿವೈಟಿಸ್’ ನಂತಹ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕುಗಳು ಪ್ರಮುಖ ಕಾರಣವಾಗಿವೆ.
  • ಕಣ್ಣಿನ ನಾಳಗಳ ತಡೆ: ಕಣ್ಣಿನಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ನೀರು ಮೂಗಿನ ನಾಳದ ಮೂಲಕ ಹೊರಹೋಗುತ್ತದೆ. ಈ ನಾಳಗಳಲ್ಲಿ ತಡೆ ಉಂಟಾದಾಗ ನೀರು ಕಣ್ಣಿನಲ್ಲಿಯೇ ಶೇಖರಣೆಯಾಗಿ ಹೊರಚೆಲ್ಲುತ್ತದೆ.
  • ಸ್ಕ್ರೀನ್ ಸಮಯ ಮತ್ತು ಆಯಾಸ: ಕಂಪ್ಯೂಟರ್, ಮೊಬೈಲ್ ಅಥವಾ ಟಿವಿಯನ್ನು ಸುದಿರ್ಘ ಕಾಲ ನೋಡುವುದರಿಂದ ಕಣ್ಣಿನ ಮೇಲಿನ ಒತ್ತಡ ಹೆಚ್ಚಾಗಿ ನೀರು ಬರಲು ಪ್ರಾರಂಭವಾಗುತ್ತದೆ.

ಕಣ್ಣಿನಲ್ಲಿ ನೀರು ಬರುವುದು ಒಂದು ರೀತಿಯಲ್ಲಿ ನಮ್ಮ ದೇಹದ ನೈಸರ್ಗಿಕ ರಕ್ಷಣಾ ವ್ಯವಸ್ಥೆಯಾಗಿದೆ. ಕಣ್ಣಿಗೆ ಧೂಳು ಅಥವಾ ಕಸ ಬಿದ್ದಾಗ ಅದನ್ನು ಹೊರಹಾಕಲು ಕಣ್ಣೀರು ಸಹಾಯ ಮಾಡುತ್ತದೆ. ಸರಿಯಾದ ಸಮಯಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು, ಪೌಷ್ಟಿಕ ಆಹಾರ ಸೇವಿಸುವುದು, ನಿರಂತರವಾಗಿ ಸ್ಕ್ರೀನ್ ನೋಡುವುದನ್ನು ತಪ್ಪಿಸಿ ಕಣ್ಣಿಗೆ ವಿಶ್ರಾಂತಿ ನೀಡುವುದರಿಂದ ಈ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !