ಜನರ ಸ್ಕಿನ್‌ಟೋನ್ ಆಧಾರದ ಮೇಲೆ ಅವರ ತುಟಿಗಳ ಬಣ್ಣ ಕೂಡ ನಿರ್ಧರಿತವಾಗುತ್ತದೆ. ಎಷ್ಟೋ ಮಂದಿ ಸ್ಮೋಕ್ ಮಾಡಿ ಕೂಡ ತಮ್ಮ ತುಟಿಗಳ ಬಣ್ಣವನ್ನು ಹಾಳುಮಾಡಿಕೊಂಡಿರುತ್ತಾರೆ. ಆದರೆ ನಿಮ್ಮ ತುಟಿ ಮತ್ತೆ ಮೊದಲಿನಂತೆ ಆಗಬೇಕು ಎಂದರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ..
🍯 ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಜೊತೆಗೆ ಸೋಂಕು ತಡೆಗಟ್ಟುತ್ತದೆ. ಇದು ತುಟಿಗಳಿಗೆ ಉತ್ತಮ ಬಣ್ಣ ನೀಡುತ್ತದೆ.
🥥 ತೆಂಗಿನ ಎಣ್ಣೆಯಲ್ಲಿ ಹೈಡ್ರೇಟಿಂಗ್ ಹಾಗೂ ಆರ್ಧ್ರಕ ಗುಣಗಳು ಹೇರಳವಾಗಿವೆ. ತುಟಿಗಳನ್ನು ಹೈಡ್ರೇಟ್ ಆಗಿರಿಸುವುದರೊಂದಿಗೆ ಒಣಗುವುದನ್ನು ಹಾಗೂ ನಿರ್ಜೀವವಾಗುವುದನ್ನು ತಡೆಯುತ್ತದೆ. ಹಾನಿಗೊಳಗಾದ ಚರ್ಮದ ಕೋಶಗಳನ್ನು ಸರಿಪಡಿಸಲು ಪೂರಕವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.
🥗 ಅಲೋವೆರಾದಿಂದ ಚರ್ಮದ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ. ಅಲೋವೆರಾದಿಂದ ತುಟಿಗಳನ್ನು ಹೊಳೆಯುವಂತೆ ಮಾಡುತ್ತದೆ.
🥒 ಸೌತೆಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು ಹಾಗೂ ಸಿಲಿಕಾ ಸಂಯುಕ್ತಗಳು ಹೇರಳವಾಗಿವೆ. ಇದರಲ್ಲಿರುವ ವರ್ಣದ್ರವ್ಯವು ಕಪ್ಪು ತುಟಿಗಳನ್ನು ಹೋಗಲಾಡಿಸಲು ಪ್ರಮುಖ ಪಾತ್ರ ವಹಿಸುತ್ತವೆ.
🍵 ಗ್ರೀನ್ ಟೀಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಹೇರಳವಾಗಿವೆ. ಹಾನಿಗೊಳಗಾದ ಚರ್ಮದ ಕೋಶಗಳನ್ನು ಸರಿಪಡಿಸಲು ಗ್ರೀನ್ ಟೀ ಅತ್ಯುತ್ತಮವಾಗಿವೆ.