ವಿಶ್ವಕಪ್‌ | ಮೆಸ್ಸಿ ಪಡೆಗೆ ಸೋಲಿನ ಆರಂಭ: ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ ಐತಿಹಾಸಿಕ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಫಿಫಾ ವಿಶ್ವಕಪ್​ ಆರಂಭದಲ್ಲೇ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಕತಾರ್‌ನ ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಗ್ರೂಪ್-ಸಿ ಪಂದ್ಯದಲ್ಲಿ ಗೆಲುವಿನ ಫೇವರಿಟ್ ತಂಡವಾಗಿ ಕಣಕ್ಕಿಳಿದಿದ್ದ ಲಿಯೋನೆಲ್‌ ಮೆಸ್ಸಿ ತಂಡವನ್ನು 2-1 ಗೋಲುಗಳ ಸೌದಿ ಅರೇಬಿಯಾ ಬಗ್ಗುಬಡಿದಿದ್ದು, ಈ ಸೋಲಿನಿಂದ ಮೆಸ್ಸಿ ಪಡೆ ದಿಗ್ಭ್ರಮೆಗೊಂಡಿದೆ. ಈ ಮೂಲಕ ಸ್ಪರ್ಧೆಯ ಆರಂಭದಲ್ಲೇ ದೊಡ್ಡ ಆಘಾತವೊಂದು ಎದುರಾಗಿದೆ.
ಪಂದ್ಯದ ಆರಂಭದಲ್ಲಿಯೇ ಅರ್ಜೆಂಟೀನಾ  ಪ್ರಾಬಲ್ಯ ಮೆರೆಯಿತು. 10ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಅದ್ಭುತ ಕಾಲ್ಚೆಳಕ ಮೆರೆದ ಮೆಸ್ಸಿ ಅದನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. ಆ ಬಳಿಕ ಮೊದಲಾರ್ಧದಲ್ಲಿ ಬೇರಾವುದೇ ಗೋಲು ದಾಖಲಾಗದಿದ್ದರಿಂದ  ಅರ್ಜೆಂಟೀನಾ ಮೊದಲಾರ್ಧದಲ್ಲಿ 1-0 ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿತು.
ದ್ವಿತೀಯಾರ್ಧದಲ್ಲಿ ಅನಿರೀಕ್ಷಿತವಾಗಿ ಪುಟಿದುನಿಂತ ಸೌದಿ ಅರೇಬಿಯಾದ ಪರಾಕ್ರಮದ ಆಟಕ್ಕೆ ಅರ್ಜೆಂಟೀನಾ ದಂಗಾಯ್ತು. ಅರ್ಜೆಂಟೀನಾಗೆ ರಕ್ಷಣಾ ಕೋಟೆಯನ್ನು ಬೇಧಿಸಿದ ಸೌದಿಯ ಸಲೇಹ್ ಅಲ್-ಶೆಹ್ರಿ 48ನೇ ನಿಮಿಷದಲ್ಲಿ ಗೋಲು ಸಿಡಿಸಿ ತಂಡಕ್ಕೆ ಸಮಬಲ ತಂದುಕೊಟ್ಟರು. ನಂತರ ಆಟದ 55ನೇ ನಿಮಿಷದಲ್ಲಿ ಸೌದಿ ಅರೇಬಿಯಾ ಪರ ಸೇಲಂ ಅಲ್ ದವ್ಸಾರಿ ಎರಡನೇ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಆ ಬಳಿಕ ಕೊನೆ ವರೆಗೂ ಅರ್ಜೆಂಟೀನಾಕ್ಕೆ ಯಾವುದೇ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!