ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಹದಿಂದ ಬರುವ ದುರ್ನಾತ ವಿಚಾರವಾಗಿ ಇಬ್ಬರು ಪ್ರಯಾಣಿಕರ ನಡುವೆ ಜಗಳ ನಡೆಯುತ್ತಿರುವಾಗ ಸಮಾಧಾನ ಮಾಡಲು ಬಂದ ವಿಮಾನ ಸಿಬ್ಬಂದಿಯನ್ನು ಪ್ರಯಾಣಿಕರಬ್ಬರು ಕಚ್ಚಿರುವ ಘಟನೆ ಶೆನ್ಜೆನ್ ಏರ್ಲೈನ್ಸ್ನಲ್ಲಿ ನಡೆದಿದೆ.
ಈ ಕಾರಣದಿಂದಾಗಿಯೇ ವಿಮಾನ ಹಾರಾಟ 2 ಗಂಟೆಗಳ ಕಾಲ ವಿಳಂಬವಾಗಿತ್ತು. ಏಪ್ರಿಲ್ 1 ರಂದು ದಕ್ಷಿಣ ಚೀನಾದ ಶೆನ್ಜೆನ್ ನಿಂದ ಶಾಂಘೈಗೆ ಹೊರಡಲು ನಿಗದಿಯಾಗಿದ್ದ ವಿಮಾನವು ಟೇಕ್ ಆಫ್ ಆಗಲು ಸಿದ್ಧವಾದಾಗ ಸಂಘರ್ಷ ಭುಗಿಲೆದ್ದಿತು. ಅಕ್ಕಪಕ್ಕದಲ್ಲಿ ಕುಳಿತಿದ್ದ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಘರ್ಷಣೆ ಆರಂಭವಾಯಿತು.
ಅವರಲ್ಲಿ ಒಬ್ಬರು ಇನ್ನೊಬ್ಬರ ದೇಹದ ವಾಸನೆಯ ಬಗ್ಗೆ ದೂರು ನೀಡಿದರೆ, ಇನ್ನೊಬ್ಬರು ತನ್ನ ಸಹ ಪ್ರಯಾಣಿಕರ ಸೆಂಟ್ನ ಬಲವಾದ ವಾಸನೆಯನ್ನು ವಿರೋಧಿಸಿದರು. ಅವರ ನಡುವಿನ ಮಾತಿನ ಚಕಮಕಿ ಶೀಘ್ರದಲ್ಲೇ ದೈಹಿಕ ಘರ್ಷಣೆಗೆ ಕಾರಣವಾಯಿತು. ಇಬ್ಬರು ಮಹಿಳಾ ವಿಮಾನ ಸಿಬ್ಬಂದಿ ಮತ್ತು ಇಬ್ಬರು ಪುರುಷ ಸಹೋದ್ಯೋಗಿಗಳು ಮಧ್ಯಪ್ರವೇಶಿಸಿ ಜಗಳವನ್ನು ತಡೆಯಲು ಪ್ರಯತ್ನಿಸಿದರು.
ಗಲಾಟೆ ನಡೆಯುತ್ತಿದ್ದಾಗ ಸೃಷ್ಟಿಯಾದ ಅವ್ಯವಸ್ಥೆಯನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ವಿಮಾನ ಸಿಬ್ಬಂದಿಯೊಬ್ಬರು, ಬಾಯಿ ತೆಗೆಯಿರಿ. ನೀವು ನನ್ನನ್ನು ಕಚ್ಚುತ್ತಿದ್ದೀರಾ ಎಂದು ವಿಮಾನ ಸಿಬ್ಬಂದಿ ಕೂಗುತ್ತಿದ್ದಾರೆ. ಸಿಬ್ಬಂದಿ ಸಣ್ಣ ಗಾಯವಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಾಗೆಯೇ ಘರ್ಷಣೆಯಲ್ಲಿ ಭಾಗಿಯಾದ ಇಬ್ಬರು ಪ್ರಯಾಣಿಕರನ್ನು ಪೊಲೀಸರು ಕರೆದೊಯ್ದರು. ಇತರ ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಇಳಿಯುವಂತೆ ಹೇಳಲಾಯಿತು.
ಗಲಾಟೆ ನಡೆಯುತ್ತಿದ್ದಾಗ ಸೃಷ್ಟಿಯಾದ ಅವ್ಯವಸ್ಥೆಯನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ವಿಮಾನ ಸಿಬ್ಬಂದಿಯೊಬ್ಬರು, ಬಾಯಿ ತೆಗೆಯಿರಿ. ನೀವು ನನ್ನನ್ನು ಕಚ್ಚುತ್ತಿದ್ದೀರಾ ಎಂದು ವಿಮಾನ ಸಿಬ್ಬಂದಿ ಕೂಗುತ್ತಿದ್ದಾರೆ. ಸಿಬ್ಬಂದಿ ಸಣ್ಣ ಗಾಯವಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಾಗೆಯೇ ಘರ್ಷಣೆಯಲ್ಲಿ ಭಾಗಿಯಾದ ಇಬ್ಬರು ಪ್ರಯಾಣಿಕರನ್ನು ಪೊಲೀಸರು ಕರೆದೊಯ್ದರು.