ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈವಾಹಿಕ ವಿಚಾರದಲ್ಲಿ ಮನೆಯಲ್ಲಿ ನಡೆದ ಕ್ಷುಲ್ಲಕ ಜಗಳದಿಂದ ಸಹೋದರ ಸಹೋದರಿ ಸಾವನ್ನಪ್ಪಿದ್ದಾರೆ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಪಟಪಳ್ಳಿ ಗ್ರಾಮದಲ್ಲಿ ಬಾವಿಗೆ ಬಿದ್ದು ಸಹೋದರ ಸಹೋದರಿ ಸಾವನ್ನಪ್ಪಿದ್ದಾರೆ.
ಸಂದೀಪ್ (23) ಮತ್ತು ನಂದಿನಿ (19) ಮೃತರು. ನಂದಿನಿಯ ಮದುವೆ ಬಗ್ಗೆ ಮನೆಯಲ್ಲಿ ಗಲಾಟೆ ನಡೆದಿದೆ. ಅದರಲ್ಲೂ ನಂದಿನಿ ಮನೆಯವರು ಹೇಳಿದ ಹುಡುಗನನ್ನು ಮದುವೆಯಾಗುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ನಂದಿನಿ ಕೋಪಗೊಂಡು ಮನೆಯಿಂದ ಹೊರಗೆ ಓಡಿ ಬಾವಿಗೆ ಹಾರಿದಳು. ಇದನ್ನು ನೋಡಿದ ಸಂದೀಪ್ ಕೂಡ ಆಕೆಯನ್ನು ಬೆನ್ನು ಹತ್ತಿ ಹೋಗಿದ್ದ. ಆದರೆ ಆತನಿಗೆ ಅವಳನ್ನು ತಡೆಯಲು ಸಾಧ್ಯವಾಗಲಿಲ್ಲ. ಏನು ಮಾಡಬೇಕೆಂದು ತಿಳಿಯದೆ ಬಾವಿಗೆ ಹಾರಿದ.
ಅಂತಿಮವಾಗಿ, ಅಣ್ಣ ತಂಗಿಯಿಬ್ಬರೂ ಈಜಲು ಬಾರದೆ ಬಾವಿಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಷಯ ತಿಳಿದ ಗ್ರಾಮಸ್ಥರು ಕೂಡಲೇ ಬಂದು ಶವವನ್ನು ಮೇಲೆತ್ತಿದ್ದಾರೆ.
ಪಟಪಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದ ಘಟನೆ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.