ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಕಪಲ್ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಬ್ರೇಕಪ್ ಬಗ್ಗೆ ಇದ್ದ ರೂಮರ‍್ಸ್‌ಗೆ ಅರ್ಜುನ್ ಕಪೂರ್ ಫುಲ್‌ಸ್ಟಾಪ್ ಇಟ್ಟಿದ್ದಾರೆ.
ಇವರಿಬ್ಬರ ನಡುವೆ ಬ್ರೇಕಪ್ ಆಗಿದ್ದು, ಮಲೈಕಾ ತುಂಬಾನೇ ಅಪ್‌ಸೆಟ್ ಆಗಿದ್ದಾರೆ. ಕೆಲ ದಿನಗಳಿಂದ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಮನೆಯೊಳಗೆ ಇರಲು ಮಲೈಕಾ ನಿರ್ಧರಿಸಿದ್ದರು ಎನ್ನುವ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿತ್ತು.
ಈ ಸುದ್ದಿಗಳು ವೈರಲ್ ಆಗುತ್ತಿದ್ದಂತೆ, ಅರ್ಜುನ್ ಕಪೂರ್ ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಈ ರೀತಿ ರೂಮರ್‌ಗಳನ್ನು ಹರಡಬೇಡಿ, ಎಲ್ಲರೂ ಸುರಕ್ಷಿತವಾಗಿರಿ, ಒಳ್ಳೆಯದಾಗಲಿ. ಬೇರೆಯವರಿಗೂ ಒಳ್ಳೆಯದಾಗಲು ಎಂದು ಹರಸಿ, ಲವ್ ಯೂ ಆಲ್ ಎಂದು ಸರ್ಕಾಸ್ಟಿಕ್ ಆಗಿ ರೂಮರ್ ಹುಟ್ಟಿಸಿದವರ ಕಾಲೆಳೆದಿದ್ದಾರೆ.