ಅರ್ಜುನನ ಗಜಗಾಂಭೀರ್ಯಕ್ಕೆ ಅವನೇ ಸಾಟಿ: ಕಂಬನಿ ಮಿಡಿದ ನಟ ದರ್ಶನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

8 ವರ್ಷಗಳಿಂದ ಮೈಸೂರು ತಾಯಿ ಚಾಮಂಡೇಶ್ವರಿ ಸೇವೆಗೈಯುತ್ತಾ ಜನರ ಪ್ರೀತಿಗೆ ಪಾತ್ರವಾಗಿದ್ದ ‘ಅರ್ಜುನ’ ಆನೆ ದುರ್ಘಟನೆಯಲ್ಲಿ ಮೃತಪಟ್ಟಿದೆ.

ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಏಕಾಂಗಿಯಾಗಿ ಹೋರಾಡಿದ ಅರ್ಜುನ ಮೃತಪಟ್ಟಿದೆ.

ಇತ್ತ ಅರ್ಜುನ ಇನ್ನಿಲ್ಲ ಅನ್ನೋ ಸುದ್ದಿ ಹೊರಬೀಳುತ್ತಿದ್ದಂತೆ ಕನ್ನಡಿಗರಿಗ ಆಘಾತವಾಗಿದೆ. ಸಿಎಂ ಸಿದ್ದರಾಮಯ್ಯ, ಸಚಿವರು ಸೇರಿದಂತೆ ಗಣ್ಯರು ಅರ್ಜುನನಿಗೆ ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅರ್ಜುನ ಜೊತೆಗಿನ ಸ್ಮರಣೀಯ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವ ಜನ, ಕಣ್ಮೀರ ವಿದಾಯ ಹೇಳುತ್ತಿದ್ದಾರೆ.

ಸಕಲೇಶಪುರದ ಬಾಳೆಕೆರೆ ಅರಣ್ಯದ ಅಂಚಿನಲ್ಲಿ ಪುಂಡಾನೆ ಸೆರೆಹಿಡಿಯಲು ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಣೆ ಆರಂಭಿಸಿತ್ತು. ಪುಂಡಾನೆ ಸೆರೆ ಹಿಡಿಯುವಲ್ಲಿ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದ ಅರ್ಜುನ ಮುಂಚೂಣಿಯಲ್ಲಿ ನಿಂತು ಕಾರ್ಯಚರಣೆ ನಡೆಸುತ್ತಿತ್ತು. ಈ ವೇಳೆ ಕೆರಳಿದ ಪುಂಡಾನೆ ಏಕಾಏಕಿ ದಾಳಿ ನಡೆಸಿದೆ. ಅರ್ಜುನ ಒಂದಿಂಚು ಕದಲದೆ ಹೋರಾಡಿದ್ದಾನೆ. ಅರ್ಜುನನ ಜೊತೆಗಿದ್ದ ಆನೆಗೆ ಓಡಿದೆ. ಇತ್ತ ಅಧಿಕಾರಿಗಳು, ಮಾವುತರು ಮೇಲೂ ಪಂಡಾನೆ ದಾಳಿಗೆ ಮುಂದಾಗಿದೆ. ಆದರೆ ಅರ್ಜುನ ವೀರಾವೇಶದಿಂದ ಹೋರಾಡಿ ಎಲ್ಲರನ್ನೂ ಕಾಪಾಡಿದ್ದಾನೆ. ದುರಂತ ಎಂದರೆ ಈ ಕಾದಾಟದಲ್ಲಿ ಅರ್ಜುನ ಮೃತಪಟ್ಟಿದ್ದಾನೆ.

ಅರ್ಜುನ ಸಾವಿನ ಸುದ್ದಿ ಬೆನ್ನಲ್ಲೇ ಬೇಸರ ವ್ಯಕ್ತಪಡಿಸಿದ ನಟ ದರ್ಶನ್ , ೮ ಬಾರಿ ದಸರಾ ಅಂಬಾರಿ ಹೊತ್ತು ನಾಡಿನ ಜನಮನ ಗೆದ್ದಿದ್ದ ೬೪ ವರ್ಷದ ‘ಅರ್ಜುನ’ ಇಂದು ಕಾಡಾನೆಗಳ ಕಾಳಗದಲ್ಲಿ ಸಾವನ್ನಪ್ಪಿರುವುದು ವಿಷಾದದ ಸಂಗತಿ. ಅರ್ಜುನನ ಗಜಗಾಂಭೀರ್ಯಕ್ಕೆ ಅವನೇ ಸಾಟಿ ಎಂದು ನೋವು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!