ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಟಿಂಡಾ ಸೇನಾ ನೆಲೆಯಲ್ಲಿ ಇತ್ತೀಚೆಗೆ ನಡೆದಿದ್ದ ನಾಲ್ವರು ಸೈನಿಕರ ಹತ್ಯೆಯ ಪ್ರಕರಣದಲ್ಲಿ ಓರ್ವ ಯೋಧನನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು (Punjab Police) ತಿಳಿಸಿದ್ದಾರೆ
ಯೋಧ ಮೋಹನ್ ದೇಸಾಯಿ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ವಿಚಾರಣೆ ವೇಳೆ ಆರೋಪಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ವೈಯಕ್ತಿಕ ವಿಚಾರಕ್ಕಾಗಿ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿರುವುದಾಗಿ ಹೇಳಿದ್ದಾನೆ.
ಘಟನೆಯ ಸಾಕ್ಷಿ ಮೇಜರ್ ಅಶುತೋಷ್ ಶುಕ್ಲಾ ಅವರ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಏ.12ರ ಮುಂಜಾನೆ ನಡೆದಿದ್ದ ಗುಂಡಿನ ದಾಳಿಯಲ್ಲಿ ನಿದ್ರೆಯಲ್ಲಿದ್ದ ನಾಲ್ವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದರು. ಸೇನೆಯ ಫಿರಂಗಿ ಘಟಕಕ್ಕೆ ಸೇರಿದ ಸಾಗರ್, ಕಮಲೇಶ್, ಸಂತೋಷ್ ಮತ್ತು ಯೋಗೇಶ್ ಹತ್ಯೆಯಾದ ಯೋಧರು ಎಂದು ತಿಳಿದು ಬಂದಿತ್ತು.