ದಾರಿಯಿಲ್ಲದೆ ಜನರ ಪರದಾಟ: ಸಂಕಷ್ಟದಲ್ಲಿದ್ದವರಿಗೆ ಸೇತುವೆ ನಿರ್ಮಿಸಿಕೊಟ್ಟ ಭಾರತೀಯ ಸೇನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬರಾಮುಲ್ಲಾ ಜಿಲ್ಲೆಯ ಬೋನಿಯಾರ್ ತೆಹಸಿಲ್‌ನ ದೂರದ ಗ್ರಾಮವಾದ ಘಗ್ಗರ್ ಹಿಲ್ ಗ್ರಾಮದ ಸ್ಥಳೀಯರಿಗಾಗಿ ಭಾರತೀಯ ಸೇನೆಯು 20 ಅಡಿ ಉದ್ದ ಮತ್ತು ಮೂರು ಅಡಿ ಅಗಲದ ತಾತ್ಕಾಲಿಕ ಮರದ ಸೇತುವೆಯನ್ನು ನಿರ್ಮಿಸಿಕೊಟ್ಟು ಸಹಾಯ ಮಾಡಿದೆ. ಸೇತುವೆ ಇಲ್ಲದ ಕಾರಣ ಗ್ರಾಮಸ್ಥರು ವಿಶೇಷವಾಗಿ ಮಕ್ಕಳು, ಮಹಿಳೆಯರು ನಿತ್ಯ ಹಪತ್ ಖಾಯಿ ನಾಲಾ ದಾಟಿ ತಮ್ಮ ಮನೆಗಳಿಗೆ ತೆರಳಲು ಪರದಾಡುತ್ತಿದ್ದರು.

ಪಾರೊದಲ್ಲಿನ ಭಾರತೀಯ ಸೇನಾ ತುಕಡಿಯು ಸ್ಥಳೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾಹಿತಿ ಪಡೆದ ನಂತರ ತಾತ್ಕಾಲಿಕ ಪರಿಹಾರವನ್ನು ಒದಗಿಸಲು ಕಾರ್ಯಪ್ರವೃತ್ತವಾಗಿದೆ. ಡಾಗರ್ ವಿಭಾಗದ ನವೀನ ಯೋಧರು ಮರ ಮತ್ತು ಮಿಲಿಟರಿ ನಿರ್ಮಾಣ ಉಪಕರಣಗಳನ್ನು ಬಳಸಿ 20 ಅಡಿ ಉದ್ದ ಮತ್ತು ಮೂರು ಅಡಿ ಅಗಲದ ತಾತ್ಕಾಲಿಕ ಮರದ ಸೇತುವೆಯನ್ನು ನಿರ್ಮಿಸಿದರು.

ತಾತ್ಕಾಲಿಕ ಸೇತುವೆಯು ರೋಗಿಗಳು, ಮಕ್ಕಳು ಮತ್ತು ಗರ್ಭಿಣಿಯರು ತಮ್ಮ ಮನೆಗಳಿಗೆ ಹಪತ್ ಖಾಯಿ ನಾಲಾ ಮೂಲಕ ಘಗ್ಗರ್ ಬೆಟ್ಟದ ಗ್ರಾಮಕ್ಕೆ ತಲುಪಲು ನೆರವಾಗಿದೆ. ಭಾರತೀಯ ಸೇನೆ ಇಂತಹ ದೂರ ದೂರದ ಹಳ್ಳಿಗಳಲ್ಲಿ ಮಾನವೀಯ ನೆರವಿಗಾಗಿ ಪೂರ್ವಭಾವಿಯಾಗಿ ಹೆಜ್ಜೆ ಹಾಕುತ್ತಿದೆ ಎಂದು ಸೇನೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಈ ಹಿಂದೆ, ಭಾರತೀಯ ಸೇನೆಯು ಹನ್ನೊಂದಕ್ಕೂ ಹೆಚ್ಚು ಅಸ್ವಸ್ಥ ಗ್ರಾಮಸ್ಥರನ್ನು,  ಮತ್ತು ಹಿಮದಿಂದ ಆವೃತವಾದ ರಸ್ತೆಗಳ ಮೇಲೆ ಹತ್ತಿರದ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿತ್ತು. ಮಂಗಳವಾರ ಮಚಿಲ್ ಸೆಕ್ಟರ್‌ನ ಹಿಮಪಾತದ ಕುಪ್ವಾರದ ದುಡಿ ಗ್ರಾಮದಿಂದ ಹೆಲಿಕಾಪ್ಟರ್ ಮೂಲಕ ಗರ್ಭಿಣಿ ಮಹಿಳೆಯೊಬ್ಬರನ್ನು ಭಾರತೀಯ ಸೇನೆ ಮತ್ತು ಜಿಲ್ಲಾಡಳಿತದ ಜಂಟಿ ಪ್ರಯತ್ನದಿಂದ ರಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!