ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಮಾಜಿ ಸೈನಿಕರೊಬ್ಬರನ್ನು ಅವರ ನಿವಾಸದ ಬಳಿ ಉಗ್ರರು ಹತ್ಯೆ ಮಾಡಿದ ನಂತರ ಭದ್ರತಾ ಪಡೆಗಳು ದೊಡ್ಡ ಪ್ರಮಾಣದ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಆರಂಭಿಸಿವೆ.
ಘಟನೆಗೆ ಕಾರಣರಾದವರನ್ನು ಪತ್ತೆಹಚ್ಚಲು ಅಧಿಕಾರಿಗಳು ಪ್ರಯತ್ನಗಳನ್ನು ತೀವ್ರಗೊಳಿಸುತ್ತಿರುವುದರಿಂದ, ವಿಚಾರಣೆಗಾಗಿ ಡಜನ್ ಗಟ್ಟಲೆ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ.
ಮೊನ್ನೆ ಸೋಮವಾರ ಮಧ್ಯಾಹ್ನ ಉಗ್ರರು ಮಂಜೂರ್ ಅಹ್ಮದ್ ವಾಗೆ ಮೇಲೆ ದಾಳಿ ಮಾಡಿ ಕೊಂದು ಹಾಕಿದ ನಂತರ ಪೊಲೀಸರು ಸಿಆರ್‌ಪಿಎಫ್ ಮತ್ತು ಸೇನಾಧಿಕಾರಿಗಳು ಬೆಹಿಬಾಗ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದಾಳಿಯಲ್ಲಿ ಅವರ ಪತ್ನಿ ಮತ್ತು ಸೊಸೆ ಕೂಡ ಗಾಯಗೊಂಡಿದ್ದಾರೆ.
ಭದ್ರತಾ ಸಿಬ್ಬಂದಿ ಡ್ರೋನ್ ಮತ್ತು ಇತರ ಸುಧಾರಿತ ಕಣ್ಗಾವಲು ಸಾಧನಗಳನ್ನು ಬಳಸಿಕೊಂಡು ಪ್ರದೇಶವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸ್ಥಳೀಯ ಓವರ್ ಗ್ರೌಂಡ್ ವರ್ಕ ರ್ಸ್‌ನಿಂದ ಉಗ್ರಗಾಮಿಗಳು ಲಾಜಿಸ್ಟಿಕ್ ಬೆಂಬಲವನ್ನು ಪಡೆದಿದ್ದಾರೆ ಎಂದು ತನಿಖಾಧಿಕಾರಿಗಳು ನಂಬಿರುವುದರಿಂದ, ಸೇನಾಧಿಕಾರಿಗಳು ಮನೆ ಮನೆಗೆ ತೆರಳಿ ಶೋಧ ನಡೆಸುತ್ತಿವೆ.