ಗೂಂಡಾಗಳನ್ನು ಆರ್ಮಿ ಸೇರಿಸಿಕೊಳ್ಳುವುದಿಲ್ಲ: ಮಾಜಿ ಸೇನಾಮುಖ್ಯಸ್ಥರ ಖಡಕ್‌ ಮಾತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
“ಗೂಂಡಾ ವಾದದಲ್ಲಿ ತೊಡಗಿರುವ ಚಳವಳಿಗಾರರು, ರೈಲು ಮತ್ತು ಬಸ್ಸುಗಳನ್ನು ಸುಡುವವರು, ಹಿಂಸಾಚಾರಕ್ಕೆ ಕಾರಣವಾದ ಗೂಂಡಾಗಳನ್ನು ನೇಮಿಸಿಕೊಳ್ಳಲು ಆರ್ಮಿಗ ಬಯಸುವುದಿಲ್ಲ ಅವರನ್ನು ಯಾವುದೇ ಸಶಸ್ತ್ರ ಪಡೆಗಳಲ್ಲಿ ಸೇರಿಸಕೊಳ್ಳಲು ಸಾಧ್ಯವಿಲ್ಲ” ಎಂದು ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಸೇನಾ ಮುಖ್ಯಸ್ಥರಾಗಿದ್ದ ಜನರಲ್‌ ವಿಪಿ ಮಲಿಕ್‌ ಹೇಳಿದ್ದಾರೆ.

ದೇಶಕ್ಕಾಗಿ ಹೋರಾಡಲು ಸ್ವಯಂ ಪ್ರೇರಣೆಹೊಂದಿರುವವರನ್ನು ಮಾತ್ರ ಸೇನೆಗೆ ಸೇರಿಸಿಕೊಳ್ಳಲಾಗುತ್ತದೆಯೇ ವಿನಃ ಉದ್ಯೋಗ ಕೊಡುವ ಕಲ್ಯಾಣ ಸಂಘಟನೆಯಲ್ಲ ಎಂಬುದನ್ನು ಒತ್ತಿ ಹೇಳಿದ ಅವರು “ಸಶಸ್ತ್ರ ಪಡೆಗಳು ಸ್ವಯಂಸೇವಕ ಪಡೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಅದೊಂದು ಕ್ಷೇಮಾಭಿವೃದ್ಧಿ ಸಂಘಟನೆಯಲ್ಲ. ಆದ್ದರಿಂದ ಅದರಲ್ಲಿ ದೇಶಕ್ಕಾಗಿ ಹೋರಾಡುವ, ದೇಶವನ್ನು ರಕ್ಷಿಸುವ ಅತ್ಯುತ್ತಮ ವ್ಯಕ್ತಿಗಳು ಮಾತ್ರವಿರಬೇಕು. ಗೂಂಡಾವಾದದಲ್ಲಿ ತೊಡಗಿರುವವರು, ರೈಲುಗಳು ಮತ್ತು ಬಸ್ಸುಗಳನ್ನು ಸುಡುವವರಿಗೆ ಸೇನೆಗೆ ಸೇರಲು ಅರ್ಹತೆಯಿಲ್ಲ” ಎಂದು ಹೇಳಿದ್ದಾರೆ.

ಕೋವಿಡ್‌ ಸಮಯದಲ್ಲಿ ನೇಮಕಾತಿ ಕಾರ್ಯಕ್ರಮವನ್ನು ಅಮಾನತುಗೊಳಿಸಿದಾಗ ಪರೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ಅಭ್ಯರ್ಥಿಗಳ ಬಗ್ಗೆ ಮಲಿಕ್‌ ಸಹಾನು ಭೂತಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ “ಅಗ್ನಿಪಥದಲ್ಲಿ ಅವರಿಗೆಂದೇ ವಿನಾಯಿತಿ ನೀಡಿ ಎರಡು ವರ್ಷ ಗರಿಷ್ಟ ವಯೋಮಿತಿ ಏರಿಕೆ ಮಾಡಲಾಗಿದೆ.  ನಾಲ್ಕು ವರ್ಷಗಳ ನಂತರ ನಿರುದ್ಯೋಗದ ಭಯ ಅನಗತ್ಯ. ಏಕೆಂದರೆ ತಮ್ಮ ಸೇವಾವಧಿ ಮುಗಿದ ನಂತರ ಪೋಲಿಸ್ ಮತ್ತು ಅರೆಸೇನಾಪಡೆಗೆ ಲ್ಯಾಟರಲ್ ಎಂಟ್ರಿ ಕೊಡುವುದಾಗಿ ಭರವಸೆ ನೀಡಲಾಗಿದೆ ಅಲ್ಲದೇ ಕಳೆದ ಎರಡು ವರ್ಷಗಳ ಹಿಂದಿನಿಂದ ಕಾಯುತ್ತಿರುವ ಅಲ್ಲರಿಗೂ ಅವಕಾಶ ನೀಡಲು ವಯೋಮಿತಿಯನ್ನೂ ಕೂಡ ಏರಿಕೆ ಮಾಡಲಾಗಿದೆ” ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ  ಅವರು ಪ್ರತಿಕ್ರಿಯಿಸಿದ್ದಾರೆ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!