43 ಗಂಟೆಗಳ ಕಾಲ ಬೆಟ್ಟದ ಸಂದುವಿನಲ್ಲಿ ಸಿಲುಕಿದ್ದ ಯುವಕನ ರಕ್ಷಣೆ ಮಾಡಿದ ಭಾರತೀಯ ಸೇನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟ್ರೆಕ್ಕಿಂಗ್ ಹೋಗಿ ಬೆಟ್ಟದ ತುದಿಯಲ್ಲಿ ನಿಂತು ಸೆಲ್ಫಿ ತಗೋಳೋದು, ಆಟ ಆಡಿ ಎಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈವರೆಗೆ ನಾವು ಕೇಳಿರುವ ಘಟನೆಗಳಿಂತ ಭಯಂಕರವಾದ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಲಂಪುಳ ಗ್ರಾಮದಲ್ಲಿನ ಬೆಟ್ಟವೊಂದರ ಬಾಬು ಸಿಲುಕಿಕೊಂಡಿದ್ದರು.
ಮೂವರು ಸ್ನೇಹಿತರ ಜತೆ 1000 ಮೀಟರ್ ಟ್ರೆಕ್ಕಿಂಗ್ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಬಾಬು ಜಾರಿ ಕೆಳಗೆ ಬಿದ್ದಿದ್ದಾರೆ. ನಂತರ ತಾನು ಬೆಟ್ಟದ ತುದಿಯಲ್ಲಿ ಸಿಲುಕಿಕೊಂಡಿರುವ ಬಗ್ಗೆ ಬಾಬು ತನ್ನ ಮೊಬೈಲ್ ನಿಂದ ತನ್ನ ಸ್ನೇಹಿತರು ಹಾಗೂ ಪೊಲೀಸರಿಗೆ ಫೋಟೋ ಕಳುಹಿಸಿ ಕೋರಿದ್ದಾರೆ.
ಸೀಳಿನಲ್ಲಿ ಸಿಲುಕಿ ಸತತ 43 ಗಂಟೆಗಳ ಕಾಲ ಜೀವ ಹಿಡಿದು ಕುಳಿರಿದ್ದ ಯುವಕನನ್ನು ಸೇನಾ ಪಡೆ ರಕ್ಷಣೆ ಮಾಡಿದೆ.
ಅದೃಷ್ಟವಶಾತ್ ಬಾಬು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ರಕ್ಷಣಾ ಕಾರ್ಯ ನಡೆದಿದ್ದು ಹೇಗೆ?
ಸೇನಾ ಇಂಜಿನಿಯರಿಂಗ್ ವಿಭಾಗ ಮತ್ತು ಎನ್‌ಡಿಆರ್‌ಎಫ್ ತಂಡಗಳು ಬೆಟ್ಟದಲ್ಲಿ ಬೀಡುಬಿಟ್ಟಿದ್ದರು. ಆತನ ರಕ್ಷಣೆ ಆಗುವವರೆಗೆ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಪರ್ವತಾರೋಹಣ ತಜ್ಞರು ಸೇರಿದಂತೆ ಸೇನಾ ತಂಡಗಳ ಉಪಕರಣಗಳು ಬಂದಿದದ್ದು, ಪೊಲೀಸ್ ಭಯೋತ್ಪಾದನ ನಿಗ್ರಹ ದಳದ ಸದಸ್ಯರೂ ಕೂಡ ಸಹಾಯಕ್ಕೆ ಧಾವಿಸಿದ್ದರು.

Image

ಸೋಮವಾರ ಹಗ್ಗಗಳನ್ನು ಬಿಡಿಸಿ ಕಮರಿಗೆ ತಲುಪಲು ಯತ್ನಿಸಿದರೂ ವಿಫಲವಾಯಿತು, ಬಲವಾದ ಗಾಳಿಯಿಂದ ರಕ್ಷಣಾ ಕಾರ್ಯಾಚರಣ ವಿಳಂಬಾಗುತ್ತಿತ್ತು. ಆದರೆ ಬುಧವಾರ ಬೆಳಗ್ಗೆ ಕರ್ನಲ್ ಶೇಖರ್ ಅತ್ರಿ ನೇತೃತ್ವದ ತಂಡ ಹಾಗೂ ಲೆಫ್ಟಿನೆಂಟ್ ಕರ್ನಲ್ ಹೇಮಂತ್ ರಾಜ್ ಅವರ ತಂಡ ರಕ್ಷಣಾ ಕಾರ್ಯಾಚರಣೆ ನಡೆಸುವಲ್ಲಿ ಯಶಸ್ವಿಯಾಗಿದೆ.
ಬೆಟ್ಟದ ತುದಿಯಲ್ಲಿ ಕುಳಿತಿದ್ದ ಬಾಬುಗೆ ಬೆಲ್ಟ್ ಹಾಗೂ ಹೆಲ್ಮೆಟ್ ಧರಿಸಿ ಸೇನಾ ತಂಡ ನಿರಂತರ 40 ನಿಮಿಷಗಳ ಕಾರ್ಯಾಚರಣೆ ಬಳಿಕ ಬಾಬುರನ್ನು ಬೆಟ್ಟದ ತುದಿಗೆ ಕರೆದೊಯ್ದಿದೆ.
ನಂತರ ರಕ್ಷಣೆಗೆ ಆಗಮಿಸಿದ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ನಲ್ಲಿ ಕಂಚಿ ಕೋಡ್ ಜಿಲ್ಲಾಸ್ಪತ್ರೆಗೆ ಆತನನ್ನು ಕೊಂಡೊಯ್ಯಲಾಗಿದೆ. ಯುವಕನ ಆರೋಗ್ಯದ ಬಗ್ಗೆ ಸೇನೆ ಹೆಚ್ಚಿನ ನಿಗಾ ವಹಿಸಿದೆ.
ಭಾರೀ ಅಪಾಯದಿಂದ ತನ್ನನ್ನು ಪಾರು ಮಾಡಿದ ರಕ್ಷಣಾ ತಂಡಕ್ಕೆ ಹಾಗೂ ಭಾರತೀಯ ಸೇನೆಗೆ ಬಾಬು ಧನ್ಯವಾದ ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!