ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಿನ ಉಪಾಹಾರ. ಮಧ್ಯಾಹ್ನದ ಊಟದ ವ್ಯವಸ್ಥೆ ಜೊತೆಗೆ ಈಗ ಮಲಗುವ ವ್ಯವಸ್ಥೆ ಕೂಡ ಆಗಿದೆ ಅಂತೆ. ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ಹೆಚ್ಚಿಸಲು ಸ್ಪೀಕರ್ ಯು.ಟಿ.ಖಾದರ್ ಹೊಸ ಉಪಾಯ ಮಾಡಿದ್ದಾರೆ.
ಲಾಂಜ್‌ನಲ್ಲಿ recliner chair ಹಾಕಲಾಗಿದ್ದು, ಅದನ್ನು ಬಳಸುವಂತೆ ಸ್ಪೀಕರ್ ಖಾದರ್ ಸೂಚಿಸಿದ್ದಾರೆ.
ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡಿದ್ದು, ಇಂದಿನ ಸಭೆಯಲ್ಲಿ ಈ ಕುರಿತು ಘೋಷಣೆ ಮಾಡಿದ ಸ್ಪೀಕರ್. ಈಗ ಕೆಲವು ಶಾಸಕರು ಊಟ ಮತ್ತು ಮಲಗಲು LH ಗೆ ಪ್ರಯಾಣಿಸುತ್ತಾರೆ. ಕೆಲವರು ಬರುವುದೇ ಇಲ್ಲ. ಅದಕ್ಕಾಗಿಯೇ ಶಾಸಕರು ಲಾಂಜ್‌ನಲ್ಲಿ recliner chair ಹಾಕಿದ್ದೇವೆ. ಇಲ್ಲೇ ಮಲಗಿಕೊಳ್ಳಿ, ನಮಗೆ ಅಗತ್ಯವಿದ್ದರೆ ನಾವು ನಿಮ್ಮನ್ನು ಕರೆಯುತ್ತೇವೆ ಎಂದು ಖಾದರ್ ತಿಳಿಸಿದ್ದಾರೆ.