ಹೊಸದಿಗಂತ ವರದಿ, ಮೈಸೂರು:
ಮದುವೆ ಮನೆಯಿಂದ ಅಪ್ರಾಪ್ತಿ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಬೇಲೂರು ಗ್ರಾಮದ ಪ್ರತಾಪ್ ಬಂಧಿತ ಆರೋಪಿ ಸಂಬAಧಿಕರ ಮದುವೆಗೆಂದು ತನ್ನ ಪೋಷಕರೊಂದಿಗೆ
ಮೈಸೂರಿನ ಗೋಕುಲಂ ಬಡಾವಣೆಯಲ್ಲಿರುವ ಶಿವಮ್ಮಮಹದೇವಪ್ಪ ಕಲ್ಯಾಣ ಮಂಟಪಕ್ಕೆ ಬಂದು ತಂಗಿದ್ದ ಬಾಲಕಿಯನ್ನು ಪ್ರತಾಪ್ ಅಪಹರಿಸಿಕೊಂಡು ಹೋಗಿದ್ದ. ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಗಾಬರಿಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ತಕ್ಷಣವೇ ಕಾರ್ಯಚರಣೆ ನಡೆಸಿದ ಮೈಸೂರಿನ ವಿವಿಪುರಂ ಠಾಣೆಯ ಪೊಲೀಸರು, ತನಿಖೆ ನಡೆಸಿದಾಗ, ಮಂಡ್ಯ ಜಿಲ್ಲೆ ಬೇಲೂರು ಗ್ರಾಮದ ಪ್ರತಾಪ್ ಅಪ್ರಾಪ್ತೆಯನ್ನ ಅಪಹರಿಸಿಕೊಂಡು ಹೋಗಿ ಮಂಡ್ಯದ ಸಬ್ ರಿಜಿಸ್ಟಾçರ್ ಕಚೇರಿಯಲ್ಲಿ ಮದುವೆಯಾಗಿರುವುದು ಪತ್ತೆಯಾಯಿತು. ಕೂಡಲೇ ಆತನನ್ನು ಬಂಧಿಸಿದ ಪೊಲೀಸರು, ಅಪಹರಣಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ತೆಗೆದುಕೊಂಡು, ಬಾಲಕಿಯನ್ನು ರಕ್ಷಿಸಿ, ಬಾಲಮಂದಿರದ ವಶಕ್ಕೆ ಆಕೆಯನ್ನು ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.