ನಾಳೆಯಿಂದಲೇ ಬಾಲ್ಯ ವಿವಾಹವಾದವರ ಅರೆಸ್ಟ್: ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ದಿಟ್ಟ ನಿರ್ಧಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲ್ಯ ವಿವಾಹ ತಡೆಯಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅತ್ಯಂತ ಕಠಿಣ ನಿರ್ಧಾರ ಘೋಷಿಸಿದ್ದಾರೆ.

ಈ ಕುರಿತು ಅಸ್ಸಾಂ ಸಂಪುಟ ಸಭೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ನಾಳೆಯಿಂದಲೇ(ಫೆ.03) ಬಾಲ್ಯ ವಿವಾಹವಾದವರನ್ನು ಬಂಧಿಸಲು ಆದೇಶ ನೀಡಿದ್ದಾರೆ.
ಸರ್ಕಾರ ಆದೇಶದಲ್ಲಿ ಮತ್ತೊಂದು ಮಹತ್ವದ ಆಂಶ ಸೇರಿಸಲಾಗಿದ್ದು, ಇತ್ತೀಚೆಗಿನ ಬಾಲ್ಯ ವಿವಾಹ ಹಾಗೂ ವರ್ಷಗಳ ಹಿಂದಿನ ಬಾಲ್ಯ ವಿವಾಹ ಎರಡೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಸೂಚಿಸಲಾಗಿದೆ.
ಇತ್ತ ಬಿಸ್ವಾ ಶರ್ಮಾ ಸೂಚನೆ ಬೆನ್ನಲ್ಲೇ ಅಸ್ಸಾಂ ಪೊಲೀಸರು ಸದ್ಯ 4,000 ಬಾಲ್ಯ ವಿವಾಹ ಪ್ರಕರಣ ಕೈಗೆತ್ತಿಕೊಂಡಿದ್ದಾರೆ. ಇದರ ಜೊತೆಗೆ ರಹಸ್ಯವಾಗಿ ಆಗಿರುವ ಮದುವೆಗಳ ಕುರಿತು ಗಮನಹರಿಸಿದ್ದಾರೆ. ನಾಳೆಯಿಂದ ಪೊಲೀಸರು ಬಾಲ್ಯ ವಿವಾಹವಾಗಿರುವರ ಮೇಲೆ ದಾಳಿ ನಡೆಸಲಿದ್ದಾರೆ.

ಮುಂದಿನ 6 ರಿಂದ 7 ದಿನಗಳಲ್ಲಿ ಅಪ್ರಾಪ್ತ ಬಾಲಕಿಯರನ್ನು ಮದುವೆಯಾಗಿರುವ ಪುರುಷರನ್ನು ಬಂಧಿಸಲಾಗುವುದು. ರಾಜ್ಯದಲ್ಲಿ ಬಾಲ್ಯ ವಿವಾಹ ಹೆಚ್ಚಾಗುತ್ತಿದೆ. ಹೆಣ್ಣುಮಕ್ಕಳ ಹಕ್ಕುಗಳ ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಬಾಲ್ಯ ವಿವಾಹ ವಿರುದ್ದ ಕಠಿಣ ಕಾನೂನು ಎಲ್ಲಾ ರಾಜ್ಯದಲ್ಲಿರುವಂತೆ ಅಸ್ಸಾಂನಲ್ಲೂ ಜಾರಿಯಲ್ಲಿದೆ. ಆದರೆ ಬಾಲ್ಯ ವಿವಾಹ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ಬಾಲ್ಯ ವಿವಾಹವಾಗಿರುವ ಪುರುಷರು ಜೈಲು ಸೇರಲಿದ್ದಾರೆ. ಇದು ಎಲ್ಲರಿಗೂ ಎಚ್ಚರಿಕೆ ಕರೆಗಂಟೆಯಾಗಿದೆ. ಬಾಲ್ಯ ವಿವಾಹಕ್ಕೆ ಮುಂದಾಗುವ ಪುರುಷರ ಮುಂದಿನ ಜೀವನ ಜೈಲಿನಲ್ಲಿ ಎಂದು ಹಿಮಂತ್ ಬಿಸ್ವಾ ಶರ್ಮಾ ಎಚ್ಚರಿಕೆ ನೀಡಿದ್ದಾರೆ.

14 ವರ್ಷಕ್ಕಿಂತ ಕಳೆಗಿನ ಬಾಲಕಿಯರನ್ನು ಮದುವೆಯಾಗಿರುವ ಪುರುಷರ ಮೇಲೆ ಪೋಕ್ಸೋ ಕೇಸ್ ಹಾಕಲು ಸೂಚಿಸಲಾಗಿದೆ. 18 ವರ್ಷಕ್ಕಿಂತ ಕಳೆಗಿನ ಬಾಲಕಿಯರ ಮದುವೆಯಾಗಿರುವ ಪುರುಷರೂ ಕೂಡ ಜೈಲು ಸೇರಲಿದ್ದಾರೆ.

ಇಲ್ಲಿ ಕೇವಲ ಬಾಲ್ಯ ವಿವಾಹ ಮಾತ್ರ ನೋಡಲಾಗುತ್ತದೆ. ಅವರ ಧರ್ಮ, ಜಾತಿಗಳನ್ನು ನೋಡಲಾಗುವುದಿಲ್ಲ. ಕಾನೂನು ಪ್ರಕಾರವೇ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈಗಾಗಲೇ ಪೊಲೀಸರು 4,000 ಕ್ಕೂ ಹೆಚ್ಚು ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದಾರೆ. ನಾಳೆಯಿಂದ ಕ್ರಮ ಜಾರಿಯಾಗಲಿದೆ ಎಂದು ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!