ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಯಾವುದನ್ನೂ ಅತಿಯಾಗಿ ಮಾಡುವುದು ಸಮಸ್ಯೆ ತಂದೀತು. ಎಲ್ಲವನ್ನೂ ಮಿತಿಯಲ್ಲೆ ಮಾಡಿರಿ. ವ್ಯಕ್ತಿಯೊಬ್ಬರ ವರ್ತನೆಯಿಂದ ಬೇಸರ.
ವೃಷಭ
ಇದ್ದುದಷ್ಟೆ ಸಾಕು ಎಂಬ ಭಾವ ಬಿಟ್ಟುಬಿಡಿ. ಹೆಚ್ಚಿನದ್ದನ್ನು ಸಾಧಿಸಲು ಗಮನ ಕೊಡಿ. ಏಕೆಂದರೆ ನಿಮ್ಮ ಸಾಮರ್ಥ್ಯ ಇನ್ನೂ ಹೆಚ್ಚಿನದ್ದಿದೆ. ಅದನ್ನು ವ್ಯರ್ಥ ಮಾಡಬೇಡಿ.
ಮಿಥುನ
ಕುಟುಂಬದಲ್ಲಿ ವಾದವಿವಾದಕ್ಕೆ ಆಸ್ಪದ ಕೊಡದಿರಿ. ಅದು ನಿಯಂತ್ರಣ ತಪ್ಪೀತು. ದುಡುಕಿನ ವರ್ತನೆ ಕೆಲಸ ಕೆಡಿಸೀತು. ಸಂಯಮ ಅತಿ ಮುಖ್ಯ.
ಕಟಕ
ಎಲ್ಲರ ಬೇಕುಬೇಡಗಳಿಗೆ ಸ್ಪಂದಿಸುವ ನಿಮ್ಮ ಮನೋಭಾವ ಮೆಚ್ಚುಗೆ ಗಳಿಸುವುದು. ಆರ್ಥಿಕ ಉನ್ನತಿ. ಪ್ರಮುಖ ಬೇಡಿಕೆಯೊಂದು ಈಡೇರುವುದು.
ಸಿಂಹ
ಇತರರು ನಿಮ್ಮ ಮಾತು ಕೇಳಬೇಕೆಂದು ಬಯಸುವಿರಿ. ಆದರೆ ನಿಮ್ಮ ಮಾತಿಗೆ ಕೆಲವರಿಂದ ಬೆಲೆ ಸಿಗಲಾರದು. ಅದಕ್ಕಾಗಿ ಬೇಸರಿಸಬೇಡಿ.
ಕನ್ಯಾ
ಹೆಚ್ಚಿನ ಹಣ ಗಳಿಕೆಗಾಗಿ ಉತ್ತಮ ಯೋಜನೆ ಹಾಕಿರಿ. ಆತುರದ ತೀರ್ಮಾನ ಹಾನಿ ತಂದೀತು. ಬಂಧುಗಳಿಂದ ಸಹಕಾರ ನಿರೀಕ್ಷಿಸಬೇಡಿ.
ತುಲಾ
ಕೆರಿಯರ್ ಇಂದು ಪ್ರಮುಖವಾಗುತ್ತದೆ ವೃತ್ತಿಯ ನಿರ್ವಹಣೆ ಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳಿ. ಎಲ್ಲ ಸುಸೂತ್ರವಾಗುವುದು.
ವೃಶ್ಚಿಕ
ನಾಳಿನ ಬದುಕನ್ನು ಹಸನುಗೊಳಿಸಲು ಹೆಚ್ಚು ಆದ್ಯತೆ ಕೊಡುವಿರಿ. ಆದರೆ ‘ಇಂದಿನ ದಿನ’ ಮರೆಯದಿರಿ. ವರ್ತಮಾನಕ್ಕೂ ಮಹತ್ವ ಕೊಡಿರಿ.
ಧನು
ಕೇವಲ ಚಿಂತಿಸುವುದಷ್ಟೆ ಅಲ್ಲ, ಮಾತನ್ನೂ ಆಡಬೇಕು. ಇತರರ ಆದೇಶ ಪಾಲಿಸುವುದಷ್ಟೇ ಅಲ್ಲ, ನೀವೂ ಸೂಕ್ತ ಪ್ರತಿಕ್ರಿಯೆ ನೀಡಲು ಕಲಿಯಬೇಕು.
ಮಕರ
ಪ್ರೀತಿಪಾತ್ರರ ಸಂಗದಲ್ಲಿ ಮುಕ್ತವಾಗಿ ವ್ಯವಹರಿಸಿ. ನಿಮ್ಮ ಭಾವನೆ, ಕಷ್ಟ ಅಡಗಿಸಿಡಬೇಡಿ. ಮುಕ್ತ ಮಾತಿನಿಂದ ಕೆಲವೊಮ್ಮೆ ಸಮಸ್ಯೆಗೆ ಪರಿಹಾರ ದೊರಕುವುದು.
ಕುಂಭ
ವೃತ್ತಿಯಲ್ಲಿ ಸಂಕಷ್ಟ. ಮೇಲಧಿಕಾರಿಗಳ ಮುಂದೆ ನಿಮ್ಮ ಅಭಿಪ್ರಾಯ ಹೇಳಲು ಹಿಂಜರಿಕೆ ಬೇಡ. ಹಣದ ವಿಚಾರದಲ್ಲಿ ಸೂಕ್ತ ಯೋಜನೆ ಬೇಕು.
ಮೀನ
ಪ್ರೀತಿಯ ವಿಚಾರದಲ್ಲಿ ಕೆಲವು ಸಮಸ್ಯೆ ಉಂಟಾದೀತು. ನಿಷ್ಠೆಯನ್ನು ಶಂಕಿಸಲು ಹೋಗದಿರಿ. ಅರ್ಥ ಮಾಡಿಕೊಂಡು ವ್ಯವಹರಿಸಿರಿ.