ಕಬ್ಬಿಣದ ಶೀಟ್ ಕಳ್ಳರ ಬಂಧನ: 11 ಲಕ್ಷ ರೂ. ವೌಲ್ಯದ ವಸ್ತುಗಳ ವಶ

ಹೊಸದಿಗಂತ ವರದಿ, ಮಳವಳ್ಳಿ:

ಪಟ್ಟಣದ ಹೊರವಲಯದ ಮಾರೇಹಳ್ಳಿ ಕೆರೆ ಏರಿಯ ಮೇಲಿನ ತಡೆಗೋಡೆಯ ಕಬ್ಬಿಣದ ಶೀಟ್‌ಗಳನ್ನು ಕಳ್ಳತನ ಮಾಡಿದ್ದ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಳ್ಳೇಗಾಲ ಪಟ್ಟಣದ ಶೇರ್ ಆಲಿ(29). ನರಸೀಪುರ ತಾಲ್ಲೂಕಿನ ಗರ್ಗೇಶ್ವರಿ ಗ್ರಾಮದ ಮಹಮ್ಮದ್ ಶಾದಬ್, ಹಂಜ ಹುಸೇನ್ (34) ಹಾಗೂ ಸಮೀರ್ ಪಾಷಾ(32) ಬಂಧಿತ ಆರೋಪಿಗಳು.
ಬಂಧಿತರಿಂದ 11 ಲಕ್ಷ ನಗದು, 3.5 ಲಕ್ಷ ಮೌಲ್ಯದ 13 ಕಬ್ಬಿಣದ ಗಟ್ಟಿ ಪೀಸ್ ಗಳು, ಒಂದು ಲಾರಿ, ಒಂದು ಸ್ಕಾರ್‌ಫಿಯೋ ಕಾರು ವಶಪಡಿಸಿಕೊಳ್ಳಲಾಗಿದೆ. ಕಳೆದ ತಿಂಗಳ ಹಿಂದೆ ಮಾರೇಹಳ್ಳಿ ಕೆರೆ ಏರಿಯ ಮೇಲಿನ ತಡೆಗೋಡೆಯ ಕಬ್ಬಿಣದ ಶೀಟ್ ಗಳನ್ನು ಹಂತ-ಹಂತವಾಗಿ ಕಳ್ಳತನ ಮಾಡಿಲಾಗುತ್ತು. ಪ್ರಕರಣ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಫೆ.9ರಂದು ಮಾರೇಹಳ್ಳಿ ಕೆರೆ ಬಳಿ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ದರೋಡೆಗೆ ಸಂಚು ಹೊಂಚು ಹಾಕಿ ಕುಳಿತಿದ್ದ 6-7 ಮಂದಿಯ ಮೇಲೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರೇಹಳ್ಳಿ ಕೆರೆ ಏರಿ, ಟಿ.ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಡಣಾಯಕನಪುರ ಗ್ರಾಮದ ಬೀರಿಹುಂಡಿ, ತಲಕಾಡು ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿಪುರ-ಕೊಳ್ಳೇಗಾಲ ಮುಖ್ಯರಸ್ತೆಯ ತಡೆಗೋಡೆಗಳ ಕಬ್ಬಿಣ ಶೀಟ್ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣ ತನಿಖೆಯ ಜಿಲ್ಲಾ ಪೋಲೀಸ್ ಅದೀಕ್ಷಕ ಎನ್.ಯತೀಶ್, ಅಪರ ಪೋಲೀಸ್ ಅದೀಕ್ಷಕ ವೇಣುಗೋಪಾಲ್, ಡಿವೈಎಸ್ಪಿ ಎಚ್.ಲಕ್ಷೀ ನಾರಾಯಣ ಪ್ರಸಾದ್ ಮಾರ್ಗದರ್ಶನದಲ್ಲಿ ಸಿಪಿಐ ಎ.ಕೆ.ರಾಜೇಶ್, ಪಿಎಸ್‌ಐ ದಾಸಪ್ಪ, ಎಎಸ್‌ಐಗಳಾದ ಕೆ.ಸಿ.ಹುಚ್ಚಯ್ಯ, ಕಾಳಪ್ಪ, ರವಿಕುಮಾರ್ ಸಿಬ್ಬಂದಿಗಳಾದ ಸಿದ್ದರಾಜು, ಪ್ರಭುಸ್ವಾಮಿ, ಹರ್ಷ, ರಿಯಾಜ್ ಪಾಷಾ, ಶಿವಕುಮಾರ್, ಉಮೇಶ್, ನದ್ಾ, ಶಬಾನ, ಶಿವರಾಜು, ಮಹೇಂದ್ರ, ಲೋಕೇಶ್, ಸಿದ್ದೇಗೌಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!