ಮೈಸೂರಿನಲ್ಲಿ ಇಬ್ಬರು ಕಳ್ಳರ ಬಂಧನ; 8 ಲಕ್ಷ ರೂ ಮೌಲ್ಯದ ಲ್ಯಾಪ್ ಟಾಪ್‌, ಮೊಬೈಲ್‌ ವಶ

ಹೊಸದಿಗಂತ ವರದಿ ಮೈಸೂರು:

ಮೈಸೂರಿನಲ್ಲಿ ಇಬ್ಬರು ಕಳ್ಳರನ್ನು ಬಂಧಿಸಿರುವ ವಿಜಯನಗರ ಠಾಣೆಯ ಪೊಲೀಸರು ಲಕ್ಷಾಂತರ ರೂ ಮೌಲ್ಯದ ಲ್ಯಾಪ್ ಟಾಪ್‌ಗಳು, ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾನು ಹಾಗೂ ಮನೋಹರ್ ಬಂಧಿತ ಆರೋಪಿಗಳು. ಇವರು ವಿದ್ಯಾರ್ಥಿಗಳ ಸೋಗಿನಲ್ಲಿ ಬೆಳಿಗ್ಗೆ ವೇಳೆ ನಗರದ ವಿಜಯನಗರದ ಮನೆಗಳು ಹಾಗೂ ಪಿಜಿಗಳಿಗೆ ಹೋಗಿ ಲ್ಯಾಪ್ ಟಾಪ್ ಮತ್ತು ಮೊಬೈಲ್ ಗಳನ್ನು ಕಳುವು ಮಾಡುತ್ತಿದ್ದರು.
ಕಳೆದೊಂದು ತಿಂಗಳಿನಿಂದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಕಳ್ಳತನಗಳು ಹೆಚ್ಚಿದ್ದವು. ಇದರ ಪತ್ತೆಗೆ ವಿಶೇಷ ಕಾರ್ಯಾಚರಣೆ ಕೈಗೊಂಡ ಪೊಲೀಸರು ಲ್ಯಾಪ್ ಟಾಪ್ ಬ್ಯಾಗ್ ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಾಬು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ  ಮನೋಹರ ಎಂಬಾತನ ಜೊತೆ ಸೇರಿ ಈ ಕೃತ್ಯ ನಡೆಸಿರುವುದಾಗಿ ತಿಳಿಸಿದ್ದು, ಬಳಿಕ ಇಬ್ಬರನ್ನೂ ಬಂಧಿಸಿ, ಅವರಿಂದ 8 ಲಕ್ಷ ರೂ ಮೌಲ್ಯದ ಲ್ಯಾಪ್ ಟಾಪ್‌ಗಳು ಹಾಗೂ 12 ಮೊಬೈಲ್ ಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!