XXX ವೆಬ್‌ ಸರಣಿಯಲ್ಲಿ ಸೈನಿಕರ ಪತ್ನಿಯರಿಗೆ ಅಪಮಾನ: ಏಕ್ತಾ ಕಪೂರ್‌ ವಿರುದ್ಧ ಬಂಧನ ವಾರಂಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
‘XXX’ ವೆಬ್ ಸರಣಿಯ  ಸೀಸನ್ 2 ನಲ್ಲಿ ಸೈನಿಕರು ಹಾಗೂ ಅವರ ಅವರ ಕುಟುಂಬ ಸದಸ್ಯರನ್ನು ಅಪಮಾನಿಸಿದ ಆರೋಪದ ಮೇಲೆ ಕಿರುತೆರೆ ನಿರ್ಮಾಪಕಿ ಏಕ್ತಾ ಕಪೂರ್ ಮತ್ತು ಆಕೆಯ ತಾಯಿ ಶೋಭಾ ಕಪೂರ್ ವಿರುದ್ಧ ಬಿಹಾರದ ಬೇಗುಸರಾಯ್ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ.
ಏಕ್ತಾ ಮತ್ತು ಶೋಭಾ ಕಪೂರ್ ಅವರು ನ್ಯಾಯಾಲಯದ ಸಮನ್ಸ್ ಅನ್ನು ತಪ್ಪಿಸಿಕೊಂಡ ಬಳಿಕ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ.
ಮಾಜಿ ಸೈನಿಕ ಮತ್ತು ಬೇಗುಸರೈ ನಿವಾಸಿ ಶಂಭು ಕುಮಾರ್ ಅವರು 2020 ರಲ್ಲಿ ಸಲ್ಲಿಸಿದ ದೂರಿನ ಮೇರೆಗೆ ಈ ವಾರಂಟ್ ಹೊರಡಿಸಲಾಗಿದೆ. ಏಕ್ತಾಕಪೂರ್‌ ನಿರ್ಮಾಣ ಸಂಸ್ಥೆ ಆಲ್ಟ್ ಬಾಲಾಜಿ ಮೂಲಕ ಒಟಿಟಿಯಲ್ಲಿ ಪ್ರಸಾರವಾದ XXX ವೆಬ್‌ ಸೀರೀಸ್‌ ನಲ್ಲಿ ಲೈಂಗಿಕ ಸಂಬಂಧದ ಎಳೆಗಳನ್ನು ಇಟ್ಟುಕೊಂಡು ಚಿತ್ರಿಸಲಾಗಿದೆ. ಇದರ ಎರಡನೇ ಸೀಸನ್‌ನಲ್ಲಿ ಸೈನಿಕರ ಹೆಂಡತಿಯರಿಗೆ ಸಂಬಂಧಿಸಿದ ಹಲವಾರು ಆಕ್ಷೇಪಾರ್ಹ ದೃಶ್ಯಗಳನ್ನು ಒಳಗೊಂಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬೇಗುಸರಾಯ್‌ನಲ್ಲಿನ ದೂರಿನ ಹೊರತಾಗಿ, ಮುಜಾಫರ್‌ಪುರ ಮತ್ತು ಇಂದೋರ್‌ನಲ್ಲಿ ವೆಬ್ ಸರಣಿಗೆ ಸಂಬಂಧಿಸಿದಂತೆ ಏಕ್ತಾ ಕಪೂರ್ ವಿರುದ್ಧ ಇನ್ನೂ ಎರಡು ದೂರುಗಳನ್ನು ದಾಖಲಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!