ನಿರ್ಬಂಧಿತ ಪ್ರದೇಶಕ್ಕೆ ತೆರಳಿ ವಿಡಿಯೋ ಮಾಡಿದ ಯುಟ್ಯೂಬರ್‌ ಅರೆಸ್ಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಏರ್‌ಪೋರ್ಟ್‌ನ ರನ್‌ವೇಯಲ್ಲಿ ವಿಡಿಯೋ ಮಾಡಿದ ಕನ್ನಡದ ಯುಟ್ಯೂಬರ್‌ ವಿಕಾಸ್‌ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

ಯುಟ್ಯೂಬರ್‌ ವಿಕಾಸ್‌ ಗೌಡ ವ್ಯೂಸ್‌ ಹೆಚ್ಚು ಮಾಡಿಕೊಳ್ಳುವ ಭರದಲ್ಲಿ ರನ್‌ವೇಯಲ್ಲಿ ವಿಡಿಯೋ ಮಾಡಿದ್ದಾನೆ. ನಿರ್ಬಂಧಿತ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಿಸಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ ಕಾರಣ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ವಿಕಾಸ್​ ಗೌಡ ವಿಡಿಯೋದಲ್ಲಿ 24 ಗಂಟೆ ರನ್ ವೇ ಬಳಿಯೇ ಇದ್ದೆ ಎಂದು ಹೇಳಿಕೊಂಡು ವಿಡಿಯೋ ಮಾಡಿದ್ದನು. ಟಿಕೆಟ್ ಇಲ್ಲದೆ ಒಳಗಡೆ ಹೋಗಿದ್ದೆ ಎಂದು ಹೇಳಿಕೊಂಡಿದ್ದನು. ವಿಡಿಯೋ ಮಾಡಿ ತನ್ನ ಯೂಟ್ಯೂಬ್ ನಲ್ಲಿ ಹಾಕಿಕೊಂಡಿದ್ದನು.

ಯೂಟ್ಯೂಬರ್ ವಿಡಿಯೋ ಬಳಿಕ ಏರ್ಪೋರ್ಟ್ ಪೊಲೀಸರಿಂದ ಯೂಟ್ಯೂಬರ್ ವಿಕಾಸ್ ಗೌಡ ಬಂಧನವಾಗಿದೆ. ಆತನ ಮೇಲೆ ಸಿಐಎಸ್ಎಫ್ ಅಧಿಕಾರಿಗಳು ಕೇಸ್​​ ದಾಖಲಿಸಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!