ಕೊಡಗಿನಲ್ಲಿ ವರುಣನ ಆಗಮನ: ಕಾಫಿ ಬೆಳೆಗಾರರಲ್ಲಿ ಮಂದಹಾಸ

ಹೊಸದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯ ಕೆಲವೆಡೆ ಸೋಮವಾರ ವರುಣನ ಆಗಮನವಾಗಿದೆ.

ವೀರಾಜಪೇಟೆ ತಾಲೂಕಿನ ಬೆಳ್ಳುಮಾಡು, ಕುಂಜಿಲಗೇರಿ ವ್ಯಾಪ್ತಿಯಲ್ಲಿ ವರ್ಷದ ಮೊದಲ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ಬಳಲಿದ್ದ ಆ ಭಾಗದ ಜನರಿಗೆ ತಂಪೆರೆದಿದೆ.

ಇತ್ತೀಚಿನ ದಿನಗಳಲ್ಲಿ ಆ ಭಾಗದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿತ್ತು. ಅಲ್ಲದೆ ಕಾಫಿ ಗಿಡಗಳು ಒಣಗಿ ನಿಂತಿದ್ದವು. ಇದೀಗ ಸುರಿದ ಮಳೆಯಿಂದ ಆ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಕೊಡಗಿನ ನಾಪೋಕ್ಲು ಸಮೀಪದ ಕುಂಜಿ ಲಗೇರಿ ,ಬೊಳ್ಳುಮಾಡು ,ಚೆಯ್ಯoಡಾಣೆ, ಕಡಂಗ , ಕರಡ ,ಹರಪಟ್ಟು ನರಿಯಂದಡ,ಗ್ರಾಮಗಳಲ್ಲಿ ಸೋಮವಾರ ಸಂಜೆ ಬಿರುಸಿನ ಮಳೆ ಸುರಿಯಿತು. ಬಿಸಿಲಿನಿಂದ ಬಸವಳಿದಿದ್ದ ಜನರು ನಿಟ್ಟುಸಿರಿಟ್ಟರು. ಬೆಳೆಗಾರರು ಸಂತಸ ಗೊಂಡರು.

ಸೋಮವಾರ ಸಂಜೆ ಕೊಡಗಿನ ಹಲವೆಡೆ ಮೋಡ ಕವಿದ ವಾತಾವರಣದೊಂದಿಗೆ ಕೆಲವೆಡೆ ಗುಡುಗು ಕೂಡಾ ಕಂಡು ಬಂದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!