ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾ ಮೂಲದ ಖಲಿಸ್ತಾನ್ ಟೈಗರ್ ಫೋರ್ಸ್(ಕೆಟಿಎಫ್) ಕಾರ್ಯಕರ್ತ ಅರ್ಶ್‌ದೀಪ್ ಸಿಂಗ್ ಗಿಲ್ ಅಲಿಯಾಸ್ ಅರ್ಶ್ ದಲ್ಲಾ ನನ್ನು ಕೇಂದ್ರ ಗೃಹ ಸಚಿವಾಲಯ(ಎಂಹೆಚ್‌ಎ) ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, 1967 ರ ಅಡಿಯಲ್ಲಿ ಭಯೋತ್ಪಾದಕ ಎಂದು ಘೋಷಿಸಿದೆ.
ಕೊಲೆ, ಸುಲಿಗೆ ಮತ್ತು ಘೋರ ಅಪರಾಧಗಳಲ್ಲಿಅರ್ಶ್ ದಲ್ಲಾ ಭಾಗಿಯಾಗಿದ್ದಾನೆ. ಭಯೋತ್ಪಾದಕ ಚಟುವಟಿಕೆಯಲ್ಲೂ ಜೊತೆಯಾಗಿದ್ದ ಹತ್ಯೆಗಳ ಆರೋಪವಿದೆ.
ಅಧಿಸೂಚನೆಯ ಪ್ರಕಾರ, ಕೆನಡಾದಲ್ಲಿ ನೆಲೆಸಿರುವ ಅರ್ಶ್ದೀಪ್ KTF ನೊಂದಿಗೆ ಸಂಬಂಧ ಹೊಂದಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ ದಾಖಲಿಸಿರುವ ಮತ್ತು ತನಿಖೆ ನಡೆಸುತ್ತಿರುವ ಉದ್ದೇಶಿತ ಹತ್ಯೆ, ಭಯೋತ್ಪಾದಕ ನಿಧಿಗಾಗಿ ಹಣ ಸುಲಿಗೆ, ಕೊಲೆ ಯತ್ನ, ಕೋಮು ಸೌಹಾರ್ದತೆಗೆ ಭಂಗ ಉಂಟು ಮಾಡುವ ಯತ್ನ, ಪಂಜಾಬ್‌ನಲ್ಲಿ ಜನರಲ್ಲಿ ಭಯೋತ್ಪಾದನೆ ಸೃಷ್ಟಿಸುವುದು ಸೇರಿದಂತೆ ವಿವಿಧ ಪ್ರಕರಣಗಳಲ್ಲಿಆರೋಪಿಯಾಗಿದ್ದಾನೆ ಎಂದು ತಿಳಿಸಲಾಗಿದೆ.
ಅಲ್ಲದೆ ಯುಎಪಿಎ ಅಡಿಯಲ್ಲಿ ಘೋಸಿಸಲ್ಲಪಟ್ಟ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಗೆ ಹತ್ತಿರವಾಗಿದ್ದು, ಆತನ ಪರವಾಗಿ ಭಯೋತ್ಪಾದಕ ಘಟಕಗಳನ್ನು ನಡೆಸುತ್ತಿದ್ದಾರೆ. ಕೊಲೆ, ಸುಲಿಗೆ ಮತ್ತು ಉದ್ದೇಶಿತ ಹತ್ಯೆಗಳಂತಹ ಘೋರ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭಯೋತ್ಪಾದಕಕ್ಕೆ ಹಣಕಾಸು ನೆರವು, ಡ್ರಗ್ಸ್ ಅಥವಾ ಶಸ್ತ್ರಾಸ್ತ್ರಗಳ ಗಡಿಯಾಚೆ ಕಳ್ಳಸಾಗಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಲಾಗಿದೆ.