Saturday, February 4, 2023

Latest Posts

ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾದ ಇಂಡಿಯಾದ ಗ್ಲೋಬಲ್ ಬಿಸಿನೆಸ್ ಹೆಡ್ ಆಗಿ ವಿಕಾಸ್ ಪುರೋಹಿತ್ ನೇಮಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದ ಭಾರತದ ಗ್ಲೋಬಲ್ ಬಿಸಿನೆಸ್ ಗ್ರೂಪ್ ನಿರ್ದೇಶಕರಾಗಿ ವಿಕಾಸ್ ಪುರೋಹಿತ್ ಅವರನ್ನು ಸೋಮವಾರ ನೇಮಕ ಮಾಡಿದೆ.

ಕಂಪನಿಯ ಜಾಹೀರಾತು ವ್ಯವಹಾರಗಳ ನಿರ್ದೇಶಕ ಹಾಗೂ ಮುಖ್ಯಸ್ಥ ಅರುಣ್ ಶ್ರೀನಿವಾಸ್ ಮಾಹಿತಿ ನೀಡಿದ್ದು, ಕಂಪನಿಯ ವ್ಯಾಪಾರವನ್ನು ಸಕ್ರಿಯಗೊಳಿಸಲು, ಭಾರತದಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತಮಗೊಳಿಸಲು ಹಾಗೂ ದೇಶದ ಡಿಜಿಟಲ್ ಜಾಹೀರಾತು ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ವಿಕಾಸ್ ಪುರೋಹಿತ್ ಮೆಟಾ ತಂಡವನ್ನು ಸೇರುತ್ತಿರುವುದಾಗಿ ಹೇಳಿದ್ದಾರೆ.

ಕಂಪನಿಯ ಪ್ರಮುಖ ವ್ಯಾಪಾರದ ತಂಡಗಳು, ಏಜೆನ್ಸಿ ತಂಡಗಳು ಮತ್ತು ವ್ಯಾಪಾರ ಪರಿಹಾರಗಳ ತಂಡಗಳು ಅವರಿಗೆ ವರದಿ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಕಾಸ್ ಪುರೋಹಿತ್ ಅವರು 1996-2000 ದಲ್ಲಿ ವಾರಣಾಸಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (BHU) ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವಿ ಓದಿದ್ದಾರೆ.

ವ್ಯಾಪಾರ, ಮಾರಾಟ ಮತ್ತು ಮಾರ್ಕೆಟಿಂಗ್‌ನಲ್ಲಿ ವಿಕಾಸ್ ಪುರೋಹಿತ್ 20 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಹಳೆಯ ವಿದ್ಯಾರ್ಥಿಯೂ ಆಗಿರುವ ವಿಕಾಸ್ ಪುರೋಹಿತ್ ಟಾಟಾ ಕ್ಲಿಕ್, ಅಮೆಜಾನ್, ರಿಲಯನ್ಸ್, ಆದಿತ್ಯಾ ಬಿರ್ಲಾ ಗ್ರೂಪ್ ಹಾಗೂ ಟಾಮಿ ಹಿಲ್‌ಫಿಗರ್‌ನಲ್ಲಿ ಕೆಲಸ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!