ಭಾರತದಲ್ಲಿ ಪ್ರಾಮುಖ್ಯತೆ ಗಳಿಸುತ್ತಿದೆ ಕೃತಕ ಬುದ್ಧಿಮತ್ತೆ: ಎಐ ಇಂಜಿನಿಯರ್‌ ಗಳಿಗೆ ಹೆಚ್ಚುತ್ತಿದೆ ಬೇಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೃತಕ ಬುದ್ಧಿಮತ್ತೆ (AI) ಕ್ಷೇತ್ರವು ಭಾರತದಲ್ಲಿ ಹೆಚ್ಚು ಪ್ರಾಮುಖ್ಯತೆ ಗಳಿಸುತ್ತಿದ್ದು ಈ ಕ್ಷೇತ್ರದಲ್ಲಿ ಕೌಶಲ್ಯವುಳ್ಳವರಿಗೆ 45 ಸಾವಿರದಷ್ಟು ಉದ್ಯೋಗಾವಕಾಶಗಳು ತೆರೆದಿವೆ ಎಂದು ಇತ್ತೀಚಿನ ವರದಿಯೊಂದು ಬಹಿರಂಗ ಪಡಿಸಿದೆ. TeamLease Digital ನ ವರದಿಯ ಪ್ರಕಾರ ಈ ಕ್ಷೇತ್ರದಲ್ಲಿ ಫ್ರೆಶರ್‌ಗಳಿಗೂ ಕೂಡ ಆರಂಭಿಕವಾಗಿ ವಾರ್ಷಿಕ 14 ಲಕ್ಷದಷ್ಟು ಪ್ಯಾಕೇಜ್‌ ಸಿಗಲಿದೆ.

ChatGPT, Dall-E, Bing AI ಮತ್ತು Midjourney ನಂತಹ ಕೃತಕ ಬುದ್ಧಿಮತ್ತೆ ಸೇವೆಗಳು ಈಗಾಗಲೇ ಸಾರ್ವಜನಿಕರಿಗೆ ಲಭ್ಯವಿವೆ. ಈ ವರದಿಯು AI ವೃತ್ತಿಪರರಿಗೆ ಬೇಡಿಕೆಯಿರುವ ವಿವಿಧ ಕ್ಷೇತ್ರಗಳನ್ನು ಉಲ್ಲೇಖಿಸಿದ್ದು ಆರೋಗ್ಯ ರಕ್ಷಣೆ, ಶಿಕ್ಷಣ, ಬ್ಯಾಂಕಿಂಗ್, ಉತ್ಪಾದನೆ ಮತ್ತು ಚಿಲ್ಲರೆ ವ್ಯಾಪಾರದಂತಹ ಕ್ಷೇತ್ರಗಳಲ್ಲಿನ ಬರೋಬ್ಬರಿ 45,000 ದಷ್ಟು ಉದ್ಯೋಗಗಳು ಖಾಲಿ ಇವೆ. ಸ್ಕ್ರಿಪ್ಟಿಂಗ್ ಭಾಷೆಗಳಲ್ಲಿ ನುರಿತ ಕೌಶಲವುಳ್ಳ ಮತ್ತು ಯಂತ್ರ ಕಲಿಕೆ ಮಾದರಿಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿರುವ AI ವೃತ್ತಿಪರರಿಗೆ ಇದೀಗ ಬೇಡಿಕೆ ಹೆಚ್ಚುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

ಹೀಗಾಗಿ ಕೃತಕ ಬುದ್ಧಿಮತ್ತೆಗೆ ಬೇಡಿಕೆ ಹೆಚ್ಚುತ್ತಿರುವುದರಿಂದ 37 ಶೇಕಡಾದಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಕೃತಕಬುದ್ಧಿಮತ್ತೆ ವಿಷಯಗಳ ಕಲಿಕೆಯನ್ನು ಆರಂಭಿಸಿವೆ. ಅಲ್ಲದೇ 30 ಶೇಕಡಾದಷ್ಟು ಕಂಪನಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಲು AI ಕಲಿಕೆಯ ಉಪಕ್ರಮಗಳು ಅಗತ್ಯವೆಂದು ಭಾವಿಸುತ್ತವೆ. ಸಮೀಕ್ಷೆಯಲ್ಲಿ ಭಾಗವಹಿಸಿದ 56 ಶೇ. ಕಂಪನಿಗಳು AI ಬೇಡಿಕೆ-ಪೂರೈಕೆ ಅಂತರವನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಈ ಸಂಶೋಧನೆಗಳು AI ಕೌಶಲ್ಯಗಳ ಮೇಲೆ ಹೆಚ್ಚುತ್ತಿರುವ ಒತ್ತು ಮತ್ತು ಭಾರತೀಯ ಉದ್ಯೋಗ ಮಾರುಕಟ್ಟೆಯಲ್ಲಿ AI ವೃತ್ತಿಪರರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಎತ್ತಿ ತೋರಿಸುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!