March 25, 2026
Wednesday, March 25, 2026
spot_img

ಅಂದು ಐಪಿಎಲ್ ನಲ್ಲಿ ಆಡುತ್ತಿದ್ದ ಆರ್ಯಮಾನ್ ಬಿರ್ಲಾ ಇಂದು ಆರ್‌ಸಿಬಿಯ ನೂತನ ಬಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಅಬ್ಬರ ಶುರುವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬರೋಬ್ಬರಿ 16,700 ಕೋಟಿ ರೂಪಾಯಿಗೆ ಮಾರಾಟವಾಗಿದ್ದು, ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬ್ಲಾಕ್‌ಸ್ಟೋನ್ ಮತ್ತು ಬೋಲ್ಟ್ ವೆಂಚರ್ಸ್ ಜಂಟಿಯಾಗಿ ಖರೀದಿಸಿದೆ.

ಇದೀಗ ಈ ನೂತನ ಫ್ರಾಂಚೈಸಿ ಗೆ ಹೊಸ ಅಧ್ಯಕ್ಷನ ನೇಮಕವಾಗಿದ್ದು, ಈ ಹಿಂದೆ ಐಪಿಎಲ್ ನಲ್ಲಿ ಆಡುತ್ತಿದ್ದ ಆಟಗಾರ, ಪ್ರಸುತ್ತ ಆದಿತ್ಯ ಬಿರ್ಲಾ ಗ್ರೂಪ್ ನಿರ್ದೇಶಕ ಆರ್ಯಮಾನ್ ವಿಕ್ರಮ್ ಬಿರ್ಲಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ .

ಆಸಕ್ತಿದಾಯಕ ಸಂಗತಿ ಏನೆಂದರೆ, ಆರ್ಯಮಾನ್ ವಿಕ್ರಮ್ ಬಿರ್ಲಾ ಈ ಹಿಂದೆ ಕ್ರಿಕೆಟಿಗರಾಗಿದ್ದು, ಮಧ್ಯಪ್ರದೇಶದ ಪರ ರಣಜಿ ಆಡುತ್ತಿದ್ದರು. ಬಳಿಕ 2018 ರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ 30 ಲಕ್ಷಕ್ಕೆ ಖರೀದಿಸಿತು. ಆ ಬಳಿಕ ಕ್ರಿಕೆಟ್ ನಿಂದ ದೂರ ಉಳಿದ ಆರ್ಯಮಾನ್ ಉದ್ಯಮದತ್ತ ಮುಖ ಮಾಡಿದರು. ಪ್ರಸುತ್ತ ಬಿರ್ಲಾ ಮ್ಯಾನೇಜ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !