September 14, 2026
Monday, September 14, 2026
spot_img

ಮಾರ್ಚ್ 28ಕ್ಕೆ ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಟ ಬಂದ್‌ , ಹೆಚ್ಚಾಗಲಿದೆ ಆರ್‌ಸಿಬಿ ಫೀವರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇದೇ ಮಾರ್ಚ್‌ 28ಕ್ಕೆ ಐಪಿಎಲ್ ಆರಂಭವಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವೆಡೆ ಪಾರ್ಕಿಂಗ್‌ ಹಾಗೂ ಓಡಾಟ ಬಂದ್‌ ಆಗಲಿದೆ.

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್‌ ನಡುವೆ ಪಂದ್ಯ ನಡೆಯಲಿದ್ದು, ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ಕಳೆದ ವರ್ಷದ ಕಾಲ್ತುಳಿತ ಘಟನೆ ಮರುಕಳಿಸದಂತೆ ಈ ಬಾರಿ ಬಿಗಿ ಭದ್ರತೆ, ಎಐ ಕ್ಯಾಮರಾ ಕಣ್ಗಾವಲು, ಹೆಚ್ಚಿನ ಪ್ರವೇಶ ದ್ವಾರಗಳು ಹಾಗೂ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಈ ರಸ್ತೆಗಳಲ್ಲಿ ಸಂಚಾರ ಬಂದ್‌

ಕ್ವೀನ್ಸ್ ರಸ್ತೆ ಸಂಪೂರ್ಣ ನಿರ್ಬಂಧ
ಬಾಳೆಕುಂದ್ರಿ ರಸ್ತೆ ಮತ್ತು ಸಿಟಿಓ ಜಂಕ್ಷನ್ ಬಂದ್
ಎಂ.ಜಿ ರಸ್ತೆ – ಅನಿಲ್ ಕುಂಬಳೆ ವೃತ್ತದಿಂದ ಜಂಕ್ಷನ್ ವರೆಗೆ ನಿಷೇಧ
ಲಿಂಕ್ ರಸ್ತೆ ಮೂಲಕ ಎಂ.ಜಿ ರಸ್ತೆ ಹಾಗೂ ಕಬ್ಬನ್ ರಸ್ತೆ ಸಂಪರ್ಕ ಬಂದ್
ರಾಜಭವನ ರಸ್ತೆ, ಟಿ. ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ ನಿಷೇಧ
ಸೆಂಟ್ರಲ್ ಸ್ಟ್ರೀಟ್ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧ
ಲ್ಯಾವೆಲ್ಲೆ ರಸ್ತೆ – ಕ್ವೀನ್ ವೃತ್ತದಿಂದ ವಿಠ್ಠಲ್ ಮಲ್ಯ ರಸ್ತೆವರೆಗೆ ಬಂದ್
ಕಸ್ತೂರಬಾ ರಸ್ತೆ – ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದವರೆಗೆ ಬಂದ್
ಸೇಂಟ್ ಮಾರ್ಕ್ಸ್ ರಸ್ತೆ – ಕ್ಯಾಶ್ ಫಾರ್ಮಸಿ ಜಂಕ್ಷನ್‌ನಿಂದ ಅನಿಲ್ ಕುಂಬಳೆ ವೃತ್ತದವರೆಗೆ ನಿಷೇಧ
ಕಬ್ಬನ್ ಪಾರ್ಕ್ ಒಳಗಿನ ಕಿಂಗ್ ರಸ್ತೆ ಹಾಗೂ ಪ್ರೆಸ್ ಕ್ಲಬ್ ಮುಂಭಾಗ ಬಂದ್
ಬಾಲಭವನ್ ಮುಂಭಾಗ ಫೌಂಟೇನ್ ರಸ್ತೆ ಪಾರ್ಕಿಂಗ್ ನಿಷೇಧ

ಪಾರ್ಕಿಂಗ್ ವ್ಯವಸ್ಥೆ ಎಲ್ಲಿ?
ಸೆಂಟ್ ಜೋಸೆಫ್ ಇಂಡಿಯನ್ ಹೈ ಸ್ಕೂಲ್ ಮೈದಾನ
ಸೆಂಟ್ ಜೋಸೆಫ್ ಸ್ಕೂಲ್ ಮೈದಾನ
ಫ್ರೀಡಂ ಪಾರ್ಕ್ MLCP ಪಾರ್ಕಿಂಗ್
ಗರುಡ ಮಾಲ್ ಪಾರ್ಕಿಂಗ್
ಶಿವಾಜಿನಗರ ಬಸ್ ನಿಲ್ದಾಣ (1ನೇ ಮಹಡಿ)
ಈ ಸ್ಥಳಗಳಲ್ಲಿ ಬೆಳಿಗ್ಗೆ 11ರಿಂದ ರಾತ್ರಿ 9ರವರೆಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !