ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಬಾರದು ಅಂತ ಅಂಬೇಡ್ಕರ್ ಎಲ್ಲಿ ಹೇಳಿದ್ದಾರೆ ಹೇಳಿ ಎಂದು ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.
“ವಕೀಲರಾಗಿ ನೀವು ಸಂವಿಧಾನ ಓದಿಕೊಂಡಿಲ್ಲ ಅಂತ ಅನ್ನಿಸುತ್ತೆ. ಅಷ್ಟೇ ಅಲ್ಲ ಧರ್ಮ ಧರ್ಮ, ಜಾತಿ-ಜಾತಿಗಳ ನಡುವೆ ಬಿರುಕು ಮೂಡಿಸುವ ಕೆಲಸ ಕೈಬಿಡದೇ ಹೋದರೆ, ಜನರೇ ದಂಗೆ ಎದ್ದು ನಿಮಗೆ ಬುದ್ದಿ ಕಲಿಸ್ತಾರೆ” ಎಂದು X ನಲ್ಲಿ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.