ಅಂಬೇಡ್ಕರ್ ಗೆ ಅನ್ಯಾಯ ಮಾಡಿದಂತೆ, ಓಬಿಸಿಗೂ ಕಾಂಗ್ರೆಸ್ ನಿಂದ ಅನ್ಯಾಯ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

ಹೊಸದಿಗಂತ ವರದಿ,ಕಲಬುರಗಿ:

ದೇಶದಲ್ಲಿ ಬಿದ್ದು ಹೋಗಿರುವ ಗೂಡಿಗೆ ಮಲ್ಲಿಕಾರ್ಜುನ ಖರ್ಗೆಯವರನ್ನು ಅಧ್ಯಕ್ಷರನ್ನಾಗಿ ಮಾಡಿ ಕಾಯುವುದಕ್ಕೆ ಇಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದರು.

ಹಿಂದೂಳಿದ ವಗ೯ಗಳ ವಿರಾಟ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಬಿಸಿಗೆ ಹೆಚ್ಚು ಮೀಸಲು ನೀಡಿದ್ದು ನರೇಂದ್ರ ಮೋದಿ ಸರಕಾರ. ಕೇಂದ್ರದಲ್ಲಿ 27 ಒಬಿಸಿ ಸಚಿವರನ್ನು ಮಾಡಿದ್ದೂ ಸಹ ಮೋದಿ ಸರಕಾರ ಎಂದರು.

ಸಿದ್ದರಾಮಯ್ಯ ತಮ್ಮ ಮಂತ್ರಿಮಂಡಲದಲ್ಲಿ ಹಿಂದುಳಿದ ವರ್ಗದವರನ್ನು ಇಟ್ಟುಕೊಂಡಿರಲಿಲ್ಲ. ಸಿದ್ದು ಅಧಿಕಾರಕ್ಕೆ ಬಂದ ತಕ್ಷಣ ಮಲ್ಲಿಕಾರ್ಜುನ ಖರ್ಗೆಯವರನ್ನು ಮೂಲೆಗುಂಪು ಮಾಡಿದರು ಎಂದರು.

ಒಬಿಸಿ, ಕುರುಬರಿಗೆ ಸಿದ್ದರಾಮಯ್ಯ ಏನೂ ಮಾಡಲಿಲ್ಲ. ಕುರಿ ಸತ್ತರೆ 5 ಸಾವಿರ, ಆಕಳು ಸತ್ತರೆ 20 ಸಾವಿರ ಪರಿಹಾರ ಕೊಟ್ಟಿದ್ದು ಬಿಜೆಪಿ ಸರಕಾರ ಎಂದ ಅವರು, ಅಂದು ಅಂಬೇಡ್ಕರ್‌ಗೆ ಅನ್ಯಾಯ ಮಾಡಿದವರು ಇಂದು ಒಬಿಸಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!