ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವು ಬಹುಶಃ ಇತರ ಜನರ ಬಗ್ಗೆ ಭವಿಷ್ಯ ಹೇಳುವುದನ್ನು ಕೇಳಿರಬಹುದು. ಆದರೆ ಕೊಹ್ಲಿ 19 ವರ್ಷಗಳ ಹಿಂದೆ ತಮ್ಮ ಬಗ್ಗೆ ತಾವೇ ದೊಡ್ಡ ಭವಿಷ್ಯ ನುಡಿದಿದ್ದರು. ಇದು ಸತ್ಯ ಕೂಡ. ವಿರಾಟ್ ಯಾವ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದಾರೆ? ಯಾವ ಕಥೆ ಅದು ಅಂತೀರಾ ಈ ಸ್ಟೋರಿ ನೋಡಿ.
ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ನ ರಾಜ. ಆಧುನಿಕ ಕಾಲದ ಶ್ರೇಷ್ಠ ಕ್ರಿಕೆಟಿಗ ಎಂದು ಕರೆಯಲ್ಪಡುವ ವಿರಾಟ್ ಕೊಹ್ಲಿ ಯಾರಿಗೆ ತಿಳಿದಿಲ್ಲ? ಆದರೆ 2005ರಲ್ಲಿ ವಿರಾಟ್ ತಾನು ಕ್ರಿಕೆಟ್ ಜಗತಿನ್ನ ರಾಜ ಆಗತೀನಿ ಅಂತ ತಮ್ಮ ಬಗ್ಗೆ ತಾವೇ ಭವಿಷ್ಯ ನುಡಿದಿದ್ರಂತೆ. ಆತ್ಮ ವಿಶ್ವಾಸದಿಂದ ಭಾರತೀಯ ಕ್ರಿಕೆಟ್‌ನ ಆಳುವ ದೊರೆ ನಾನೇ ಎಂದು ಡಿಕ್ಲೇರ್ ಮಾಡಿಕೊಂಡಿದ್ರು.
2005 ಆಸ್ಟ್ರೇಲಿಯಾದ ಮಹಿಳಾ ತಂಡ ಭಾರತಕ್ಕೆ ಪ್ರವಾಸಕೆಂದು ಬಂದಿದದ್ದರು, ಆ ಸಮಯದಲ್ಲಿ ಈಗಿನ ಸೂಪರ್ ಸ್ಟಾರ್ ಮಹಿಳಾ ಕ್ರಿಕೆಟರ್ಗಳಾದ ಎಲ್ಲಿಸ್ ಪೆರ್ರಿ ಹಾಗೂ ಅಲಿಸಾ ಹೀಲಿ ಆಗಮಿಸಿದ್ದರು. ಈ ಪ್ರವಾಸದ ಸಮಯದಲ್ಲಿ, ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡದ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾದರು. ಎಲ್ಲಿಸ್ ಪೆರ್ರಿ ಮತ್ತು ಆಲಿಸ್ ಹೀಲಿ ಅವರನ್ನು ನೋಡಲು ಹೋದ ಕೊಹ್ಲಿ, “ಹಾಯ್ ಹಾಲೋ, ನಾನೇ ಭಾರತೀಯ ಕ್ರಿಕೆಟ್‌ನ ಮುಂದಿನ ಬಿಗ್ ಕಿಂಗ್” ಎಂದು ಹೇಳಿದರಂತೆ. ಇದನ್ನ ಕೇಳಿದ ಪೆರ್ರಿ ಹಾಗೂ ಅಲಿಸಾ ಹೀಲಿ ನಕ್ಕಿದರಂತೆ. ಆದ್ರೆ, ಈಗ ಕೊಹ್ಲಿ ಭಾರತೀಯ ಕ್ರಿಕೆಟ್‌ನ ದೊರೆಯೇ ಆಗಿದ್ದಾರೆ.