ನೀವು ಕೆಸರೆರಚಿದಷ್ಟು ಕಮಲ ಅರಳುತ್ತಲೇ ಇರುತ್ತದೆ: ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ಟೀಕಾ ಪ್ರಹಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಸಭೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ನಿನ್ನೆ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಇಂದು ಮತ್ತೆ ವಿರೋಧ ಪಕ್ಷಗಳಿಗೆ ಮಾತಿನ ತಿರುಗೇಟು ನೀಡಿದರು. ರಾಜ್ಯಸಭೆಯಲ್ಲಿ ಮಾತನಾಡಲು ಆರಂಭಿಸುತ್ತಿದ್ದಂತೆ ವಿಪಕ್ಷಗಳ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.ಆದ್ರೆ ಇದು ಯಾವುದಕ್ಕೂ ಕಿವಿಗಕೊಡದೆ ಮೋದಿ , ನಿರರ್ಗಳವಾಗಿ ಮಾತನಾಡಿದರು.

ಸರ್ಕಾರದ ಸಾಧನೆಗಳನ್ನುಮತ್ತೊಮ್ಮೆ ತಿಳಿಸಿದ ಪ್ರಧಾನಿ ಮೋದಿ, ರಾಜ್ಯಸಭೆಯಲ್ಲಿ ಕೆಲವೊಂದು ಸಂಸದರು ಮಾಡಿರುವ ಭಾಷಣ ಹಾಗೂ ಕೆಲವೊಂದು ಹೇಳಿಕೆಗಳು ನನಗೆ ಬೇಸರ ತರಿಸಿವೆ. ಎದುರಾಳಿಗಳು ಎಷ್ಟೇ ನನ್ನ ಮೇಲೆ ಕೆಸರು ಎಸೆಯಲಿ. ನನ್ನಲ್ಲಿ ಇರೋದು ಕಮಲ. ಅದು ಅರಳುತ್ತಲೇ ಇರುತ್ತದೆ ಎಂದು ಹೇಳಿದರು.

ನೀವು ಎಷ್ಟಾದರೂ ಟೀಕಿಸಿ, ಜನಬೆಂಬಲ ನಮ್ಮ ಪರವಾಗಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಡವರ ಕಲ್ಯಾಣವಾಗುತ್ತಿದೆ. ಮೂರ್ನಾಲ್ಕು ವರ್ಷದಲ್ಲಿಯೇ 11 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. 48 ಕೋಟಿ ಜನಧನ್‌ ಖಾತೆಗಳನ್ನು ತೆರೆಯಲಾಗಿದೆ. ಕೋಟ್ಯಂತರ ಮನೆಗಳಲ್ಲಿ ಶೌಚಾಲಯ ನಿರ್ಮಿಸುವ ಮೂಲಕ ಹೆಣ್ಣುಮಕ್ಕಳ ರಕ್ಷಣೆಗೆ ಭಾಷ್ಯ ಬರೆಯಲಾಗಿದೆ ಎಂದು ಸರ್ಕಾರದ ಸಾಧನೆಗಳನ್ನು ತಿಳಿಸಿದರು.

ಭಾರತದ ಸಮಗ್ರ ಅಭಿವೃದ್ಧಿಗೆ ಬಲವಾದ ಅಡಿಪಾಯವನ್ನು ರಚಿಸಬೇಕೆಂದು ಕಾಂಗ್ರೆಸ್ ಬಯಸಿದ್ದರೂ ಸಹ, ಎಲ್ಲೆಡೆ ಸಮಸ್ಯೆಗಳನ್ನು ಮತ್ತು ಸಮಸ್ಯೆಗಳನ್ನು ಸೃಷ್ಟಿಸಿತ್ತು ಅನ್ನೋದನ್ನು ನಾನು 2014ರಲ್ಲಿ ಪ್ರಧಾನಿಯಾದಾಗ ನೋಡಿದ್ದೇನೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಕೇವಲ ‘ಟೋಕನಿಸಂ’ನಲ್ಲಿ ತೊಡಗಿದೆ, ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ಎಂದಿಗೂ ಪ್ರಯತ್ನಿಸಲಿಲ್ಲ ಎಂದು ಪ್ರಧಾನಿ ಮೋದಿ ಟೀಕಾ ಪ್ರಹಾರ ನಡೆಸಿದರು.

ಕೇಂದ್ರ ಸರ್ಕಾರವು ತನ್ನ ನೀತಿಗಳಲ್ಲಿ ಬದಲಾವಣೆ ತಂದು, ಡ್ರೋನ್ ತಂತ್ರಜ್ಞಾನವನ್ನು ಸಾಮಾನ್ಯನಿಗೂ ಉಪಯೋಗವಾಗುವಂತೆ ಮಾಡಿದೆ. ಪ್ರತಿಪಕ್ಷಗಳು ವಿಜ್ಞಾನ ಮತ್ತು ತಂತ್ರಜ್ಞಾನದ ವಿರುದ್ಧವಾಗಿದ್ದು, ಅವರಿದೆ ದೇಶದ ಬಗ್ಗೆ ಕಾಳಜಿಯೇ ಇಲ್ಲ. ಕೇವಲ ರಾಜಕಾರಣ ಬಗ್ಗೆ ಮಾತ್ರವೇ ಯೋಚಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸುಮಾರು 350 ಕಂಪನಿಗಳು ರಕ್ಷಣಾ ವಲಯದಲ್ಲಿ ಇಂದು ಕೆಲಸ ಮಾಡುತ್ತಿವೆ. ನಮ್ಮ ದೇಶದ ಹೆಚ್ಚು ಕಡಿಮೆ ಒಂದು ಲಕ್ಷ ಕೋಟಿ ರೂ. ರಫ್ತು ಮಾಡುತ್ತಿದೆ. ಚಿಲ್ಲರೆಯಿಂದ ಪ್ರವಾಸೋದ್ಯಮದ ತನಕ ಎಲ್ಲ ಕ್ಷೇತ್ರಗಳು ಅಭಿವೃದ್ಧಿಯಾಗುತ್ತಿವೆ ಎಂದು ಮೋದಿ ಅವರು ಹೇಳಿದರು.

ನಮ್ಮ ಮಾರುಕಟ್ಟೆಯಲ್ಲಿ ತಮ್ಮ ಔಷಧಗಳ ಮಾರಾಟಕ್ಕೆ ವಿದೇಶಗಳಿಂದ ಒತ್ತಡವಿತ್ತು. ಈ ಬಗ್ಗೆ ಲೇಖನಗಳನ್ನು ಬರೆಯಲಾಯಿತು, ಟಿವಿಗೆ ಸಂದರ್ಶನಗಳನ್ನು ನೀಡಲಾಯಿತು. ನಿನ್ನೆಯ ತನಕವೂ ನಮ್ಮ ವಿಜ್ಞಾನಿಗಳನ್ನು ಅವಮಾನಿಸುವ ಕೆಲಸವು ನಡೆದಿದೆ. ಆದರೆ, ನನ್ನ ದೇಶದ ವಿಜ್ಞಾನಿಗಳು ತಯಾರಿಸಿದ ಲಸಿಕೆಗಳಿಗೆ ಮಾನ್ಯತೆ ದೊರೆತಿದ್ದು, ಸುಮಾರು 150 ದೇಶಗಳಿಗೆ ಲಾಭವಾಗಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!