ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ ಬದಿಯಲ್ಲಿ ಬೈಕ್‌ನಿಂದಾಗಿ ಕೆಸರು ಸಿಡಿದಿತ್ತು, ಅದಕ್ಕೆ ಆಕೆ ಎಲ್ಲರೆದುರು ನಮ್ಮನ್ನು ಅವಮಾನ ಮಾಡಿದಳು ಎಂಬ ಕಾರಣಕ್ಕೆ ಯುವತಿ ಮೇಲೆ ಗ್ಯಾಂಗ್ ಒಂದು ಸಾಮೂಹಿಕ ಅತ್ಯಾಚಾರ ನಡೆಸಿದೆ.
ಮಧ್ಯಪ್ರದೇಶದ ರೇವಾದಲ್ಲಿ ಘಟನೆ ನಡೆದಿದ್ದು, ಅವಮಾನ ಮಾಡಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಅತ್ಯಾಚಾರ ಮಾಡಿದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಆರೋಪಿ ಕಿಶನ್ ಕೋಲ್, ತನ್ನ ಬೈಕ್ನಲ್ಲಿ ಸಾಕಷ್ಟು ಕೆಸರು ಇರುವ ರಸ್ತೆಯಲ್ಲಿ ಹೋಗುತ್ತಿದ್ದೆವು, ರಸ್ತೆಬದಿಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕೆಸರು ತಾಗಿತ್ತು. ಅಷ್ಟೆಲ್ಲಾ ಜನರ ಎದುರು ತನಗೆ ಅವಮಾನ ಮಾಡಿದ್ದಳು ಎಂದು ಆರೋಪಿ ಹೇಳಿದ್ದು, ಇದರಿಂದ ತನಗೆ ಮುಜುಗರ ಉಂಟಾಯಿತು ಎಂದಿದ್ದಾನೆ.
ಅವಮಾನದಿಂದ ಕೋಪಗೊಂಡ ಆರೋಪಿಗಳು ಸಂತ್ರಸ್ತೆಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 22 ರಂದು ಕಿಶನ್ ಕೋಲ್ ಮತ್ತು ಆತನ ಸ್ನೇಹಿತ ಸಂತಲಾಲ್ ಆಕೆಯನ್ನು ಅಪಹರಿಸಿ ಪೊದೆಗಳ ಹಿಂದೆ ಕರೆದೊಯ್ದು ಅಲ್ಲಿ ಅಪರಾಧ ಎಸಗಿದ್ದರು.