ರಷ್ಯಾ ಹಿಮ್ಮೆಟ್ಟುತ್ತಿದ್ದಂತೆ ʼಖೈರ್ಸನ್‌ʼ ನಗರ ನಮ್ಮದು ಎಂದ ಝೆಲೆನ್ಸ್ಕೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಷ್ಯಾ ನಗರದಿಂದ ಸೈನ್ಯವನ್ನು ಹಿಂತೆಗೆದುಕೊಂಡ ನಂತರ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಖೆರ್ಸನ್ ನಗರ ನಮ್ಮದು ಎಂದು ಘೋಷಿಸಿದ್ದಾರೆ. ಅಮೆರಿಕವು ಇದನ್ನು “ಅಸಾಧಾರಣ ಗೆಲುವು” ಎಂದು ಶ್ಲಾಘಿಸಿದೆ.

“ಪ್ರಸ್ತುತ ನಮ್ಮ ರಕ್ಷಕರು ನಗರದ ಹೊರವಲಯದಲ್ಲಿದ್ದಾರೆ. ಆದರೆ ವಿಶೇಷ ಘಟಕಗಳು ಈಗಾಗಲೇ ನಗರದಲ್ಲಿವೆ” ಎಂದು ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. “ಮಕ್ಕಳು ನಮ್ಮನ್ನು ಭೇಟಿಯಾಗಲು ಓಡಿಬರುವುದನ್ನು ಮತ್ತು ನಮ್ಮನ್ನು ಸ್ವಾಗತಿಸುವುದನ್ನು ನಾವು ನೋಡುತ್ತಿದ್ದೇವೆ. ಖೆರ್ಸನ್‌ ನಗರದ ಜನರು ಪುಷ್ಪಗುಚ್ಛಗಳು, ಕಸೂತಿ ಟವೆಲ್ಗಳನ್ನು ಪ್ರದರ್ಶಿಸುವ ಮೂಲಕ ನಮ್ಮನ್ನು ಸ್ವಾಗತಿಸುತ್ತಿದ್ದಾರೆ” ಎಂದು ವೈದ್ಯಕೀಯ ಘಟಕದ ಕಮಾಂಡರ್ ಆಂಡ್ರಿ ಝೋಲೋಬ್ ಹೇಳಿದ್ದಾರೆ.

ಖೇರ್ಸನ್ “ಉಕ್ರೇನಿಯನ್ ನಿಯಂತ್ರಣಕ್ಕೆ ಮರಳುತ್ತಿದೆ ಮತ್ತು ಉಕ್ರೇನ್ ಸಶಸ್ತ್ರ ಪಡೆಗಳ ಘಟಕಗಳು ನಗರವನ್ನು ಪ್ರವೇಶಿಸುತ್ತಿವೆ” ಎಂದು ಕೈವ್‌ನ ರಕ್ಷಣಾ ಸಚಿವಾಲಯವು ಶುಕ್ರವಾರದ ಹಿಂದೆ ಹೇಳಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!