ಚಾಲಕನ ತಲೆಗೆ ಗುಂಡು ಬಿದ್ದಂತೆ, ನಾವು ಸತ್ತವರ ಹಾಗೆ ನಟಿಸಿ ಪ್ರಾಣ ಉಳಿಸಿಕೊಂಡ್ವಿ, ರಿಯಾಸಿ ಅಟ್ಯಾಕ್‌ ಭೀಕರತೆ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಮ್ಮು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳಿದ್ದ ಬಸ್​ ಮೇಲೆ ಲಷ್ಕರ್ ಎ ತೊಯ್ಬಾ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಅಲ್ಲಿನ ಭೀಕರತೆ ಬಗ್ಗೆ ಬದುಕುಳಿದ ಜನ ಮಾಹಿತಿ ನೀಡಿದ್ದಾರೆ.

ಚಾಲಕನ ತಲೆಗೆ ಗುಂಡು ತಗುಲಿ ಸ್ಟೇರಿಂಗ್​ ಮೇಲೆ ಮಲಗಿದ್ದನ್ನು ನಾವು ನೋಡಿದ್ದೆವು, ನಾವೂ ಕೂಡ ಸತ್ತವರಂತೆ ನಟಿಸಿದ್ದೆವು. ಬಸ್​ ಮೇಲೆ 30-40 ಬಾರಿ ಗುಂಡಿನ ದಾಳಿ ನಡೆಸಿದ್ದರು, ಪರಿಣಾಮ ಬಸ್​ ಕಂದಕಕ್ಕೆ ಉರುಳಿ 10 ಮಂದಿಯ ಜೀವ ಹೋಯ್ತು ಎಂದಿದ್ದಾರೆ.

ದಾಳಿಯಲ್ಲಿ ಇದ್ದಕ್ಕಿದ್ದಂತೆ, ಉಗ್ರರು ಬಸ್ ಮೇಲೆ ದಾಳಿ ಮಾಡಿದ್ದಾರೆ ಎಂದು ಯಾರೋ ಕೂಗಿದರು. ನಾನು ತಕ್ಷಣ ನನ್ನ ಹೆಂಡತಿ ಮತ್ತು ಮಗನನ್ನು ಸೀಟಿನ ಕೆಳಗೆ ತಳ್ಳಿದೆ. ಅಷ್ಟಾಗುತ್ತಿದ್ದಂತೆ ಬಸ್​ ಕಂದಕಕ್ಕೆ ಬಿದ್ದಿತ್ತು, ನನ್ನ ಮಗನ ಮೇಲಿನ ಹಿಡಿತ ತಪ್ಪಿತ್ತು, ಮಗನನ್ನು ಕಳೆದುಕೊಂಡೆ ಎಂದು ತಂದೆಯೊಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!