ಬಿಜೆಪಿ ಅಂದರೆ ಅರವಿಂದ್ ಕೇಜ್ರಿವಾಲ್‌ಗೆ ಭಯ-ಅಸಾದುದ್ದೀನ್‌ ಓವೈಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಜ್ರಿವಾಲ್‌ಗೆ ಬಿಜೆಪಿ ಅಂದರೆ ಭಯ ಎಂದು ಕಾಲೆಲೆದಿದ್ದಾರೆ. ದೆಹಲಿಯಲ್ಲಿ ಅಷ್ಟು ಗಲಭೆ ನಡೆಯುತ್ತಿದ್ದರೂ ಕೇಜ್ರಿವಾಲ್ ಏಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿಗೆ ಹೆದರುವ ಕೇಜ್ರಿವಾಲ್ ಜನರಿಗೆ ನ್ಯಾಯ ಒದಗಿಸುತ್ತಾರಾ ಎಂದು ವ್ಯಂಗ್ಯವಾಡಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮಿತ್ರಪಕ್ಷಗಳೊಂದಿಗೆ ಸೇರಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದರು. ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಓವೈಸಿಯವರನ್ನು ಬಿಜೆಪಿ ಬಿಟೀಮ್ ಎಂದು ಟೀಕಿಸಿದ್ದಕ್ಕೆ ಕಿಡಿ ಕಾರಿದರು.

ಗ್ಯಾನವಾಪಿ ಮಸೀದಿ ವಿಷಯದ ಕುರಿತು ಮಾತನಾಡಿದ ಒವೈಸಿ, ಗ್ಯಾನವಾಪಿ ಮಸೀದಿಯ ವಿವಾದದ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಬೇಕು. 1991 ರ ಕಾಯಿದೆಗೆ ಬದ್ಧವಾಗಿರಲು, ಗ್ಯಾನವಾಪಿ ಮಸೀದಿಯಂತಹ ಹಳೆಯ ಗಾಯಗಳನ್ನು ಕೆದಕುವುದರಿಂದ ದೇಶದಲ್ಲಿ ಇನ್ನೂ ಕೆಲವು ಹೊಸ ಸಮಸ್ಯೆಗಳು ಬರುತ್ತವೆ, ಅದು ದೇಶದಲ್ಲಿ ಅಶಾಂತಿ ಉಂಟುಮಾಡಬಹುದು ಎಂದು ಅಸಾದುದ್ದೀನ್ ಕಳವಳ ವ್ಯಕ್ತಪಡಿಸಿದರು. ಇಂತಹ ಸಮಸ್ಯೆಗಳು ಬಂದಾಗ ಕೇಂದ್ರ ಕೂಡಲೇ ಸ್ಪಂದಿಸಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!