ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೃಹಲಕ್ಷ್ಮಿ ಹಣದಿಂದ ಹೊಸ ಬ್ಯುಸ್‌ನೆಸ್ ಆರಂಭಿಸಿದ್ದು, ಮನೆ ನಡೆಸಲು ಸಹಾಯ ಮಾಡಿದ್ದು, ಹಣ ಕೂಡಿಟ್ಟು ಬ್ಯುಸಿನೆಸ್ ಆರಂಭಿಸಿದಂಥ ಸುದ್ದಿಗಳನ್ನು ಕೇಳಿದ್ದೀರಿ, ಆದರೆ ಇಲ್ಲೊಬ್ಬ ಆಶಾ ಕಾರ್ಯಕರ್ತೆ ಹಣವನ್ನು ಶಾಲೆಯ ಕುಡಿಯುವ ನೀರಿನ ಘಟಕಕ್ಕೆ ದಾನ ಮಾಡಿದ್ದಾರೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಡುಬಂದ ಚಿತ್ರಣ. ಐರಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 100 ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದರೆ ಆಶಾ ಕಾರ್ಯಕರ್ತೆ ಗಂಗಮ್ಮ ಬಡಿಗೇರ್ ಗೃಹಲಕ್ಷ್ಮೀ ಹಣವನ್ನ ಕೂಡಿಯಿಟ್ಟು ಶಾಲೆಗೆ ದಾನ ಮಾಡಿದ್ದಾರೆ.
ಗಂಗಮ್ಮ ದಂಪತಿ ಶಾಲೆಗೆ ಆಗಮಿಸಿ ಮಕ್ಕಳಿಗೆ ಶುದ್ಧ ಕುಡಿಯುವ ನೀರಿಗೆ ಸಮಸ್ಯೆ ಇರುವುದನ್ನು ನೋಡಿದರು. ಆಗ ದಂಪತಿ ಮಾತನಾಡಿ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್, ಅಥವಾ ಕುಡಿಯುವ ನೀರಿನ ಘಟಕ ಮಾಡಲು ಕೂಡಿ ಇಟ್ಟ ಹಣವನ್ನು ದಾನ ಮಾಡಿದ್ದಾರೆ. ಎಲ್ಲಾ ಮಕ್ಕಳಿಗೆ ಅನುಕೂಲ ಆಗಬೇಕು ಎಂದು ಎಂಬ ಉದ್ದೇಶದಿಂದ ಗೃಹಲಕ್ಷ್ಮೀ ಹಣ ದಾನ ಮಾಡಿದ್ದಾರೆ.
ಗಂಗಮ್ಮ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಗೃಹಲಕ್ಷ್ಮೀ ಯೋಜನೆಯಿಂದ ದೊರೆತ 12 ತಿಂಗಳ ಹಣವನ್ನು ಕೂಡಿಟ್ಟು ಶಾಲೆಗೆ ದಾನ ಮಾಡಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲು ಈ ಹಣವನ್ನು ಶಾಲೆಗೆ ನೀಡಿದ್ದಾರೆ. ಗಂಗಮ್ಮ ನೀಡಿದ ಹಣವನ್ನು ಶಾಲೆಯ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಅಥವಾ ಕುಡಿಯುವ ನೀರಿನ ಘಟಕ ತೆಗೆದುಕೊಂಡು ಸದುಪಯೋಗ ಮಾಡಿಕೊಳ್ಳುತ್ತೇವೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.