ಹೊಸದಿಗಂತ ಡಿಜಿಟಲ್ ಡೆಸ್ಕ್
ಆಕ್ಲೆಂಡ್ನ ಈಡೆನ್ ಪಾರ್ಕ್ ಮೈದಾನದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ಶಿಖರ್ ಧವನ್, ಶುಭ್ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಅಬ್ಬರದ ಆಟದ ಬಲದಿಂದ ಟೀಮ್ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 306 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ಆರಂಭಿಕ ಜೋಡಿ ಪರ ಧವನ್ ಹಾಗೂ ಗಿಲ್ ಉತ್ತಮ ಆಟ ಪ್ರದರ್ಶಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 23.1 ಓವರ್ಗಳಲ್ಲಿ 124 ರನ್ ಕಲೆಹಾಕಿತು. ಗಿಲ್ 65 ಎಸೆತಗಳಲ್ಲಿ 1 ಫೋರ್, 3 ಸಿಕ್ಸರ್ನೊಂದಿಗೆ 50 ರನ್ ಗಳಿಸಿದರೆ, ಶಿಖರ್ 77 ಎಸೆತಗಳಲ್ಲಿ 13 ವಬೌಂಡರಿಗಳಿದ್ದ 72 ರನ್ ಕಲೆಹಾಕಿ ಔಟಾದರು. 15 ರನ್ ಗಳಿಸಿ ಔಟಾಗುವ ಮೂಲಕ ಪಂತ್ ಪಂತ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಸೂರ್ಯಕುಮಾರ್ ಯಾದವ್ (4 ರನ್) ಬ್ಯಾಟ್ ಇಂದು ಅಬ್ಬರಿಸಲಿಲ್ಲ.
ಈ ಹಂತದಲ್ಲಿ ತಂಡವನ್ನು ಆಧರಿಸಿದ ಶ್ರೇಯಸ್ ಅಯ್ಯರ್ 76 ಎಸೆತಗಳಲ್ಲಿ 4 ಫೋರ್, 4 ಸಿಕ್ಸರ್ ಗಳಿದ್ದ ಭರ್ಜರಿ 80 ರನ್ ಸಿಡಿಸಿ ತಂಡಕ್ಕೆ ನೆರವಾದರು. ಇವರಿಗೆ ಮುತ್ತಮ ಸಾಥ್ ನೀಡಿದ ಸಂಜು 38 ಎಸೆತಗಳಲ್ಲಿ 36 ರನ್ ಗಳಿಸಿದರು. ಕೊನೆಯಲ್ಲಿ ಆರ್ಭಟಿಸಿದ ವಾಷಿಂಗ್ಟನ್ ಸುಂದರ್ ಕೇವಲ 16 ಎಸೆತಗಳಲ್ಲಿ 3 ಫೋರ್, 3 ಸಿಕ್ಸರ್ನೊಂದಿಗೆ 37 ರನ್ ಸಿಡಿಸಿ ತಂಡವನ್ನು 300 ರ ಗಡಿ ಮುಟ್ಟಿಸಿದರು. ನ್ಯೂಜಿಲೆಂಡ್ ಪರ ಲೂಕಿ ಫರ್ಗುಸನ್ 59 ರನ್ ನೀಡಿ 3 ವಿಕೆಟ್ ಕಬಳಿಸಿದರು. ಟಿಮ್ ಸೌಥಿ 2 ಹಾಗೂ ಆ್ಯಡಂ ಮಿಲ್ನೆ 1 ವಿಕೆಟ್ ಗಳಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ