CINE | 57ನೇ ವಯಸ್ಸಲ್ಲಿ ಮದುವೆ ಯಾಕೆ ಬೇಕಿತ್ತು ಎಂದವರಿಗೆ ಒಂದೇ ಸಾಲಿನಲ್ಲಿ ಉತ್ತರ ಕೊಟ್ಟ ಆಶಿಶ್ ವಿದ್ಯಾರ್ಥಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಆಶಿಶ್ ವಿದ್ಯಾರ್ಥಿ ತಮ್ಮ 57ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಅವರ ಎರಡನೇ ಮದುವೆ, ಅಸ್ಸಾಂ ಮೂಲದ ರೂಪಾಲಿ ಬರುವಾ ಅವರನ್ನು ಆಶಿಶ್ ಮದುವೆಯಾಗಿದ್ದು, ಟ್ರೋಲ್‌ಗೆ ಕಾರಣವಾಗಿತ್ತು.

ಈ ವಯಸ್ಸಲ್ಲಿ ಬೇಕಿತ್ತಾ ಇವೆಲ್ಲಾ, ಮಗಳ ವಯಸ್ಸಿನ ಹುಡುಗಿ ಹೀಗೆ ಸಾಕಷ್ಟು ನೆಗೆಟಿವ್ ಕಮೆಂಟ್ಸ್ ಬಂದಿದ್ದು, ಆಶಿಶ್ ಒಂದೇ ಮಾತಿನಲ್ಲಿ ಎಲ್ಲದಕ್ಕೂ ಉತ್ತರಿಸಿದ್ದಾರೆ.

ಮುದುಕ ಅನ್ನೋ ಕಮೆಂಟ್‌ಗಳೆಲ್ಲಾ ನೋಡಿದ್ದೀನಿ, ಬೇಸರ ಆಗಿದೆ ನಿಜ, ಆದರೆ ಇದೆಲ್ಲಾ ನನ್ನ ಮನಸ್ಸನ್ನು ತಟ್ಟೋದಿಲ್ಲ. ವಯಸ್ಸಾಯ್ತು ಅನ್ನೋ ಕಾರಣಕ್ಕೆ ಮದುವೆ ಆಗಬಾರದು ಅಂತೇನಿದೆ, ಜೀವನ ಸಂಗಾತಿ ಎಲ್ಲರಿಗೂ ಬೇಕು, ವಯಸ್ಸಾಯ್ತು ಎಂದು ಸಮಾಜ ನೆನಪಿಸೋಕೆ ತಯಾರಾಗಿಯೇ ಇರುತ್ತದೆ. ಖುಷಿ ಇಲ್ಲದೆ ಸಾಯಬೇಡಿ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!