ಭಾರತ್‌ಪೇ ನಿರ್ದೇಶಕ, ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ್ ಪೇ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಡೈರೆಕ್ಟರ್ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ ಸಲ್ಲಿಸಿದ್ದಾರೆ. ಹಣ ದುರುಪಯೋಗ ಆರೋಪದ ಮೇಲೆ ಕಂಟ್ರೋಲ್ಸ್‌ನ ಮುಖ್ಯಸ್ಥೆ ಹುದ್ದೆಯಿಂದ ಅಶ್ನೀರ್‌ರ ಹೆಂಡತಿ ಮಾಧುರಿ ಜೈನ್ ಗ್ರೋವರ್‌ನ್ನು ವಜಾ ಮಾಡಲಾಗಿತ್ತು. ಇದಾದ ಕೆಲ ದಿನಗಳಲ್ಲೇ ಈ ಬೆಳವಣಿಗೆ ನಡೆದಿದೆ.

ನಾನೇ ಸ್ಥಾಪಿಸಿದ ಕಂಪನಿಗೆ ಬಲವಂತವಾಗಿ ರಾಜೀನಾಮೆ ಸಲ್ಲಿಸುವಂತೆ ಮಾಡಿರುವುದಕ್ಕೆ ಭಾರವಾದ ಹೃದಯದಿಂದ ಇದನ್ನು ಬರೆಯುತ್ತಿದ್ದೇನೆ. ನನ್ನ ಹಾಗೂ ನನ್ನ ಕುಟುಂಬದ ಮೇಲೆ ಆಧಾರರಹಿತವಾಗಿ ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ. ಕೆಲವರು ನನ್ನ ವರ್ಷಸ್ಸಿಗೆ, ನನ್ನ ಕಂಪನಿಯ ವರ್ಚಸ್ಸಿಗೆ ಘಾಸಿ ಮಾಡಲು ಸಿದ್ಧರಾಗಿದ್ದಾರೆ. ಆದರೆ ಮೇಲ್ನೋಟಕ್ಕೆ ಅದನ್ನು ರಕ್ಷಿಸುವಂತೆ ಕಾಣಿಸುತ್ತಿದ್ದಾರೆ ಎಂದು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!