ಏಷ್ಯಾಕಪ್ | ಬಾಬರ್​,ಇಫ್ತಿಕರ್ ಶತಕದ ಆಟಕ್ಕೆ ಮಂಕಾದ ನೇಪಾಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಷ್ಯಾಕಪ್(Asia Cup 2023)​ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಪಾಕ್ ನಾಯಕ ಬಾಬರ್​ ಅಜಂ(151) ಮತ್ತು ಇಫ್ತಿಕರ್​ ಅಹ್ಮದ್(109*)​ ಬಾರಿಸಿದ ಶತಕದ ನೆರವಿನಿಂದ ಪಾಕಿಸ್ತಾನ ತಂಡ ಬೃಹತ್​ ಮೊತ್ತ​ ಕಲೆಹಾಕಿದೆ.

ಮುಲ್ತಾನ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಪಾಕಿಸ್ತಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ. 25 ರನ್​ ಆಗುವಷ್ಟರಲ್ಲಿ ಆರಂಭಿಕರಿಬ್ಬರ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ತಂಡಕ್ಕೆ ಆಸರೆಯಾದ ನಾಯಕ ಬಾಬರ್​ ಅಜಂ ಶತಕ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದ್ದರು. ನಿಗದಿತ 50 ಓವರ್​ ಬ್ಯಾಟಿಂಗ್​ ನಡೆಸಿದ ಪಾಕ್​ 6 ವಿಕೆಟ್​ ಕಳೆದುಕೊಂಡು 342 ರನ್​ ಗಳಿಸಿದೆ. ನೇಪಾಳ ಗೆಲುವಿಗೆ 343 ರನ್​ ಬಾರಿಸಬೇಕಿದೆ.

ನಾಯಕ ಬಾಬರ್​ ಅಜಂ ಆರಂಭದಲ್ಲಿ ನಿಧಾನ ಗತಿಗೆ ಒತ್ತು ನೀಡಿದರು. ಮತ್ತೊಂದು ಬದಿಯಲ್ಲಿ ವಿಕೆಟ್​ ಕೀಪರ್​ ಬ್ಯಾಟರ್​ ಮೊಹಮ್ಮದ್​ ರಿಜ್ವಾನ್​ ಕೂಡ ಇವರಿಗೆ ಉತ್ತಮ ಸಾಥ್​ ನೀಡಿದರು. ಉತ್ತಮವಾಗಿ ಆಡುತ್ತಿದ್ದ ರಿಜ್ವಾನ್​ ಸರಿಯಾದ ಸಂವಹನ ಕೊರತೆಯಿಂದಾಗಿ ರನೌಟ್​ ಆದರು.

ಬಳಿಕ ಬಾಬರ್​ ಮತ್ತು ಇಫ್ತಿಕರ್​ ಸೇರಿಕೊಂಡು ಉತ್ತಮ ಇನಿಂಗ್ಸ್​ ಕಟ್ಟಿದರು.ಶತಕ ಬಾರಿಸಿದ ಬಳಿಕ ಬಾಬರ್​ ತಮ್ಮ ಸೊಂಡದ ನೋವಿನ ಮಧ್ಯೆಯೂ ಬಿರುಸಿನ ಬ್ಯಾಟಿಂಗ್​ ನಡೆಸಿದರು.

ಇಫ್ತಿಕರ್ ಅಹ್ಮದ್ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್​ ಮೂಲಕ ನೇಪಾಳ ಬೌಲರ್​ಗಳ ಮೇಲೆ ಒತ್ತಡ ಹೇರಿದರು. ಪತ್ರಿ ಓವರ್​ಗೂ ಸಿಕ್ಸರ್​, ಬೌಂಡರಿ ಬಾರಿಸಿ ತಂಡದ ರನ್​ ಗಳಿಕೆಯನ್ನು ವೇಗವಾಗಿ ಏರಿಸಿದರು. ಕೇವಲ 67 ಎಸೆತದಲ್ಲಿ ಶತಕ ಬಾರಿಸಿ ಸಂಭ್ರಮಿಸಿದರು. ಒಟ್ಟು 71 ಎಸೆತಗಳಿಂದ ಅಜೇಯ 109 ರನ್​ ಬಾರಿಸಿದರು.

49 ಓವರ್​ ತನಕ ಬ್ಯಾಟಿಂಗ್​ ಕಾಯ್ದುಕೊಂಡ ಬಾಬರ್​ ಅಜಂ 130 ಎಸೆತ ಎದುರಿಸಿ 151 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಅವರ ಈ ಸೊಗಸಾದ ಇನಿಂಗ್ಸ್​ನಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್​ ಸಿಡಿಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!