ಹೊಸದಿಗಂತ ಡಿಜಿಟಲ್ ಡೆಸ್ಕ್:
ಥಾಯ್ಲೆಂಡ್ನ ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ 2023ರಲ್ಲಿ ಭಾರತ 4 x400 ಮೀಟರ್ ಮಿಶ್ರ ರಿಲೇ ತಂಡವು ಗೆಲುವು ಸಾದಿಸುವ ಮೂಲಕ ಚಿನ್ನದ ಪದಕ ಗೆದ್ದಿದೆ.
ರಾಜೇಶ್ ರಮೇಶ್, ಐಶ್ವರ್ಯಾ, ಮಿಶ್ರಾ, ಅಮೋಜ್ ಜಾಕೋಬ್ ಮತ್ತು ಶುಭಾ ವೆಂಕಟೇಶನ್ ಅವರ ರಿಲೇ ತಂಡವು ಜಪಾನ್ ಮತ್ತು ಶ್ರೀಲಂಕಾ ಹಿಂದಿಕ್ಕಿ 3.14.70 ರಾಷ್ಟ್ರೀಯ ದಾಖಲೆಯನ್ನು ಮುರಿಯಿತು. 2018ರ ಏಷ್ಯನ್ ಗೇಮ್ಸ್ ನಲ್ಲಿ 3.15.71 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ದಾಖಲೆ ಮಾಡಲಾಗಿತ್ತು.
ಇದೇ ಕೂಟದಲ್ಲಿ ಭಾರತದ ಸರ್ವೇಶ್ ಎ ಕುಶಾರೆ ಹೈಜಂಪ್ನಲ್ಲಿ 2.26 ಮೀಟರ್ ಎತ್ತರ ಜಿಗಿದು ಬೆಳ್ಳಿ ಗೆದ್ದರೆ, ತೇಜಸ್ವಿನ್ ಶಂಕರ್ ಪದಕದ ಸ್ಪರ್ಧೆಯಿಂದ ಹೊರಗುಳಿದರು. ಮಹಿಳೆಯರ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಸ್ವಪ್ನಾ ಬರ್ಮನ್ 5840 ಅಂಕಗಳೊಂದಿಗೆ ಬೆಳ್ಳಿ ಗೆದ್ದರು. ಉಜ್ಬೇಕಿಸ್ತಾನದ ಎಕಟೆರಿನಾ ವೊರೊನಿನಾ 6098 ಅಂಕಗಳೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಮುರಳಿ ಶ್ರೀಶಂಕರ್ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಪ್ಯಾರಿಸ್ 2024ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಟಿಕೆಟ್ ಗಿಟ್ಟಿಸಿಕೊಂಡರು. ಚೈನೀಸ್ ತೈಪೆಯ ಯು ಟ್ಯಾಂಗ್ ಲಿನ್ (+0.3) 8.40 ಮೀಟರ್ (+0.3) ಗುರಿ ತಲುಪಿ ಚಿನ್ನ ಗೆದ್ದರೆ, ಶ್ರೀಶಂಕರ್ 8.37 ಮೀ (-1.1) ಜಿಗಿದು ರಜತ ಪದಕ ಗೆದ್ದರು. ಚೀನಾದ ಮಿಂಗ್ಕುನ್ ಜಾಂಗ್ 8.08 ಮೀಟರ್ ಜಿಗಿದು ಮೂರನೇ ಸ್ಥಾನ ಪಡೆದರು. ಕಾಮನ್ವೆಲ್ತ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತರಾಗಿರುವ ಅವರು ಸ್ಪರ್ಧೆಯಲ್ಲಿ 8 ಮೀಟರ್ಗಿಂತ ಎತ್ತರ ಐದು ಜಿಗಿತಗಳನ್ನು ಜಗಿದರು. ಈ ಮೂಲಕ 2024 ರ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಮೊದಲ ಫೀಲ್ಡ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದಕ್ಕೂ ಮುನ್ನ ಪುರುಷರ 400 ಮೀಟರ್ ಹರ್ಡಲ್ಸ್ನಲ್ಲಿ ಭಾರತದ ಸಂತೋಷ್ ಕುಮಾರ್ ಕಂಚಿನ ಪದಕ ಗೆದ್ದಿದ್ದರು, ಕತಾರ್ನ ಮೊಹಮ್ಮದ್ ಹೆಮೇಡಾ ಬಾಸೆಮ್ (48.64 ಸೆಕೆಂಡ್) ಮತ್ತು ಜಪಾನ್ನ ಯುಸಾಕು ಕೊಡಮಾ (48.96 ಸೆಕೆಂಡ್) ಅವರನ್ನು ಹಿಂದಿಕ್ಕಿದರು.