Sunday, December 3, 2023

Latest Posts

ಏಷ್ಯನ್ ಗೇಮ್ಸ್ 2023: ಚೀನಾದಲ್ಲಿ ಇಂದಿನಿಂದ ಮಿನಿ ಒಲಿಂಪಿಕ್ಸ್ ಹಬ್ಬ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಿನಿ ಒಲಿಂಪಿಕ್ಸ್ ಎಂದು ಹೆಸರಾಗಿರುವ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ 2023 ಇಂದಿನಿಂದ ಆರಂಭವಾಗುತ್ತಿದ್ದು, ಉದ್ಘಾಟನಾ ಕಾರ್ಯಕ್ರಮವು ಚೀನಾದ ಹ್ಯಾಂಗ್‌ಝೌನ ಒಲಿಪಿಂಕ್ಸ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಸಂಜೆ 5.30ಕ್ಕೆ (ಭಾರತೀಯ ಕಾಲಮಾನ) ನಡೆಯಲಿದೆ.

ಈ ಬಾರಿ ಏಷ್ಯನ್‌ ಗೇಮ್ಸ್‌ನಲ್ಲಿ 45 ರಾಷ್ಟ್ರಗಳಿಂದ ಒಟ್ಟು 12,000 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಅಕ್ಟೋಬರ್ 8 ರಂದು ಮಿನಿ ಒಲಿಂಪಿಕ್ಸ್ ಅಂತ್ಯಗೊಳ್ಳಲಿದೆ. 16 ದಿನಗಳ ಕ್ರೀಡಾಕೂಟದಲ್ಲಿ 40 ಕ್ರೀಡೆಗಳು ನಡೆಯಲಿವೆ.

ಉದ್ಘಾಟನೆಯಲ್ಲಿ ಚೀನಾದ ಕಲೆ, ಸಾಂಸ್ಕೃತಿ ವೈಭವ ಅನಾವರಣಗೊಳ್ಳಲಿದೆ. ಅತ್ಯಾಧುನಿಕ ಲೇಸರ್ ಶೋಗಳು, ತಾರೆಯರ ನೃತ್ಯ, ಸಿಡಿಮದ್ದುಗಳ ಶಬ್ದ, ಬೆಳಕಿನ ಚಿತ್ತಾರ ನೋಡುಗರ ಕಣ್ಮನ ಸೆಳೆಯಲಿದೆ. ಈ ಸಮಾರಂಭದ ಪ್ರಮುಖ ಆಕರ್ಷಣೆಗಳಲ್ಲಿ ಕ್ರೀಡಾಪಟುಗಳ ಪಥ ಸಂಚಲನವೂ ಗಮನ ಸೆಳೆಯಲಿದ್ದು, ಭಾರತದಿಂದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಒಲಿಂಪಿಕ್ಸ್‌ನಲ್ಲಿ ಕಂಚು ವಿಜೇತ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್, ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಭಾರತದ ಧ್ವಜಧಾರಿಗಳಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!