Asian Games | ಪುರುಷ ಹಾಕಿಯಲ್ಲಿ ಪಾಕ್ ವಿರುದ್ದ ಗೆದ್ದು ಸೆಮಿಫೈನಲ್​ಗೇರಿದ ಟೀಮ್ ಇಂಡಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯನ್ ಗೇಮ್ಸ್​ನ ಪುರುಷ ಹಾಕಿ ಕ್ವಾರ್ಟರ್ ​ಫೈನಲ್​ನಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ಅಮೋಘ ಗೆಲುವು ದಾಖಲಿಸಿದೆ. ಈ ಮೂಲಕ ಟೀಮ್ ಇಂಡಿಯಾ ಸೆಮಿಫೈನಲ್​ಗೇರಿದೆ.

ಗೊಂಗ್‌ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು.

8ನೇ ನಿಮಿಷದಲ್ಲಿ ಅಭಿಷೇಕ್ ನೀಡಿದ ಉತ್ತಮ ಪಾಸ್​ ಅನ್ನು ಮಂದೀಪ್ ಗೋಲಾಗಿ ಪರಿವರ್ತಿಸಿದರು.ಇದರ ಬೆನ್ನಲ್ಲೇ 11ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಗೋಲಾಗಿಸುವಲ್ಲಿ ನಾಯಕ ಹರ್ಮನ್​ಪ್ರೀತ್ ಸಿಂಗ್ ಯಶಸ್ವಿಯಾದರು. ಅಲ್ಲದೆ ಭಾರತ ತಂಡವು 2-0 ಅಂತರದಿಂದ ಮೊದಲ ಕ್ವಾರ್ಟರ್​ ಅನ್ನು ಅಂತ್ಯಗೊಳಿಸಿತು.

30ನೇ ನಿಮಿಷದಲ್ಲಿ ರಿವರ್ಸ್ ಸ್ಟಿಕ್ ಶಾಟ್‌ನೊಂದಿಗೆ ಸುಮಿತ್ ಚೆಂಡನ್ನು ಗೋಲು ಬಲೆಯತ್ತ ತಲುಪಿಸಿದರು. ಇದನ್ನು ಅತ್ಯಾಕರ್ಷಕವಾಗಿ ಗೋಲಾಗಿ ಪರಿವರ್ತಿಸುವಲ್ಲಿ ಗುರ್ಜಂತ್ ಯಶಸ್ವಿಯಾದರು. ಮೊದಲಾರ್ಧದಲ್ಲೇ ಭಾರತ ತಂಡವು 5-0 ಅಂತರದಿಂದ ಮುನ್ನಡೆ ಸಾಧಿಸಿತ್ತು.

ಈ ಮುನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಭಾರತೀಯ ಆಟಗಾರರು ರಣ ಉತ್ಸಾಹದಲ್ಲಿ ಮೈದಾನದಲ್ಲಿ ಮೆರೆದಾಡಿದರು.
ಮೂರನೇ ಕ್ವಾರ್ಟರ್​ನ ಅಂತ್ಯದ ವೇಳೆಗೆ ಅಬ್ದುಲ್ ರಾಣಾ ಗೋಲುಗಳಿಸಿ ಅಂತರವನ್ನು 7-2 ಕ್ಕೆ ಇಳಿಸಿದರು. ಆದರೆ ಅಂತಿಮ ಸುತ್ತಿನ ಆರಂಭದಲ್ಲೇ ಶಂಶರ್ ರಿವರ್ಸ್ ಸ್ಟಿಕ್ ಶಾಟ್‌ನೊಂದಿಗೆ ಭಾರತಕ್ಕೆ 8ನೇ ಯಶಸ್ಸು ತಂದುಕೊಟ್ಟರು.

ಇನ್ನು 49ನೇ ನಿಮಿಷದಲ್ಲಿ ಲಲಿತ್ ಉಪಾಧ್ಯಾಯ ಗೋಲು ಬಾರಿಸಿದರೆ, 53ನೇ ನಿಮಿಷದಲ್ಲಿ ವರುಣ್ ಕುಮಾರ್ ಚೆಂಡನ್ನು ಗುರಿಗೆ ತಲುಪಿಸಿದರು. ಈ ಮೂಲಕ 10-2 ಅಂತರದೊಂದಿಗೆ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಭಾರತೀಯ ಹಾಕಿ ಪಡೆ ಏಷ್ಯನ್ ಗೇಮ್ಸ್​ ಸೆಮಿಫೈನಲ್​ಗೇರಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!