ಕಾವೇರಿ ಹೋರಾಟಕ್ಕೆ ಬಂದಿಲ್ಲ ಅಂದ್ರೆ ಸ್ವಾಭಿಮಾನಿಯಲ್ಲ ಅಂತಲ್ಲ: ಜಗ್ಗೇಶ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಬಂದ್‌ ಭಾಗವಾಗಿ ನಡೆದ ಕಾವೇರಿ ಹೋರಾಟ (Cauvery Protest) ಪ್ರತಿಭಟನಾ ಸಭೆಯಲ್ಲಿ ಗೈರಾಗಿದ್ದ ಬಿಜೆಪಿ ರಾಜ್ಯಸಭಾ ಸದಸ್ಯರೂ ಆಗಿರುವ ನಟ ಜಗ್ಗೇಶ್‌ (Jaggesh) ಅನಾರೋಗ್ಯದ ನಡುವೆಯೂ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಕಾವೇರಿ ಹೋರಾಟದ ಪ್ರತಿಭಟನಾ ಸಭೆಗೆ ಬಾರದೇ ಇದ್ದಿದ್ದಕ್ಕೆ ಕ್ಷಮೆ ಇರಲಿ. ಕಾವೇರಿ ಹೋರಾಟಕ್ಕೆ ಬಂದಿಲ್ಲ ಅಂದ್ರೆ ಸ್ವಾಭಿಮಾನಿಯಲ್ಲ ಅಂತಲ್ಲ. ಮೊದಲು ಅದರ ಇತಿಹಾಸ ಎಲ್ಲರೂ ಅರಿಯಬೇಕು ಎಂದು ಹೇಳಿದರು.

ಮಹಾರಾಜರು ಆಗ ನದಿಗೆ ಅಡ್ಡಲಾಗಿ ಚೆಕ್ ಪಾಯಿಂಟ್‌ ನಿರ್ಮಿಸಿದ್ದರು. ಕೊನೆಗೆ ಡ್ಯಾಮ್‌ ಕಟ್ಟಲು ಬಂದಾಗ ತಡೆಯಲು ಬಂದಿದ್ದರು. ಮೆಟ್ಟೂರು ಡ್ಯಾಂ 6 ವರ್ಷದಲ್ಲಿ ಕಟ್ಟಿಕೊಂಡರು. ಆದ್ರೆ ನಮಗೆ 20 ವರ್ಷ ಬೇಕಾಯಿತು. ಕಾವೇರಿ ಹುಟ್ಟೋದು ಕರ್ನಾಟಕದಲ್ಲೇ, ಹರಿಯೋದು ಕರ್ನಾಟಕದಲ್ಲೇ, ಆದ್ರೆ ಬಳಕೆ ಮಾತ್ರ ಅವರದ್ದು ಎಂದು ಬೇಸರ ವ್ಯಕ್ತಪಡಿಸಿದರು.

ನಟ ಜಗ್ಗೇಶ್ ಅವರು CT ಸ್ಕ್ಯಾನ್ ಮಾಡಿಸುತ್ತಿದ್ದ ಕೆಲವು ಚಿತ್ರಗಳನ್ನ ನಿನ್ನೆ (ಶುಕ್ರವಾರ) ಟ್ಟಿಟ್ಟರ್‌ನಲ್ಲಿ ಹಂಚಿಕೊಂಡು ತಮ್ಮ ಆರೋಗ್ಯ ಸ್ಥಿತಿ (Jaggesh Health Condition) ಕುರಿತು ಮಾಹಿತಿ ಹಂಚಿಕೊಂಡಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!