Sunday, December 10, 2023

Latest Posts

Asian Games | ಐತಿಹಾಸಿಕ ಸಾಧನೆಯತ್ತ ಭಾರತದ ದಿಟ್ಟ ಹೆಜ್ಜೆ: ಒಟ್ಟು ಪದಕಗಳ ಸಂಖ್ಯೆ 81ಕ್ಕೆ ಏರಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ (Asian Games) ಭಾರತದ ಅಥ್ಲೀಟ್​ಗಳು ಇದುವರೆಗಿನ ಗರಿಷ್ಠ ಸಾಧನೆ ಮಾಡಿದ್ದಾರೆ.

ಈ ಬಾರಿ 11ನೇ ದಿನಕ್ಕೆ ಒಟ್ಟು ಪದಕಗಳ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಈ ಮೂಲಕ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಅಕ್ಟೋಬರ್ 7ರವರೆಗೆ ಅಂದರೆ ಇನ್ನೂ ಮೂರು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದ್ದು ಭಾರತದ ಒಟ್ಟು ಪದಕಗಳ ಸಂಖ್ಯೆ ಹೆಚ್ಚಳವಾಗಲಿದೆ.

ಮಂಗಳವಾರ 69 ಪದಕಗಳೊಂದಿಗೆ ದಿನವನ್ನು ಅಂತ್ಯಗೊಳಿಸಿದ್ದ ಭಾರತ ಬುಧವಾರ ಸಂಜೆಯ ವೇಳೆಗೆ ಇನ್ನೂ 12 ಪದಕಗಳನ್ನು ಸೇರ್ಪಡೆಗೊಳಿಸಿದೆ. ಭಾರತವು ಇದೀಗ 18 ಚಿನ್ನದ ಪದಕಗಳನ್ನು ಗೆದ್ದುಗೊಂಡಿದ್ದು, ಜೊತೆಗೆ 31 ಬೆಳ್ಳಿ ಹಾಗು 32 ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!