Sunday, December 10, 2023

Latest Posts

Asian Games | ಸ್ಟೀಪಲ್ ಚೇಸ್’ನಲ್ಲಿ ಬೆಳ್ಳಿ ಗೆದ್ದ ಪಾರುಲ್ ಚೌಧರಿ, ಕಂಚಿಗೆ ಮುತ್ತಿಟ್ಟ ಪ್ರೀತಿ ಲಂಬಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏಷ್ಯನ್ ಗೇಮ್ಸ್ ನ ಮಹಿಳೆಯರ 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಭಾರತದ ಪಾರುಲ್ ಚೌಧರಿ ಬೆಳ್ಳಿ ಗೆದ್ದಿದ್ದಾರೆ.ಪ್ರೀತಿ ಲಂಬಾ ಕಂಚಿನ ಪದಕ ಗೆದ್ದಿದ್ದಾರೆ.

ಸಂಜನಾ ಬತುಲಾ, ಕಾರ್ತಿಕಾ ಜಗದೀಶ್ವರನ್, ಹೀರಾಲ್ ಸಾಧು ಮತ್ತು ಆರತಿ ಕಸ್ತೂರಿ ರಾಜ್ ಅವರನ್ನೊಳಗೊಂಡ ಮಹಿಳಾ ತಂಡ ಭಾರತದ ಖಾತೆ ತೆರೆದರೆ, ಆರ್ಯನ್ಪಾಲ್ ಸಿಂಗ್ ಘುಮನ್, ಆನಂದಕುಮಾರ್ ವೆಲ್ಕುಮಾರ್, ಸಿದ್ಧಾಂತ್ ಕಾಂಬ್ಳೆ ಮತ್ತು ವಿಕ್ರಮ್ ಇಂಗಳೆ ಎರಡನೇ ಕಂಚಿನ ಪದಕ ಗೆದ್ದರು.

ಮತ್ತೊಂದೆಡೆ, ಕೊರಿಯಾ ವಿರುದ್ಧದ ಮಹಿಳಾ ಡಬಲ್ಸ್ ಸೆಮಿಫೈನಲ್ನಲ್ಲಿ ಸೋಲನುಭವಿಸಿದ ನಂತರ ಸುತೀರ್ಥ ಮುಖರ್ಜಿ ಮತ್ತು ಆಹಿಕಾ ಮುಖರ್ಜಿ ಅವರ ಓಟವು ಕಂಚಿನ ಪದಕದೊಂದಿಗೆ ಕೊನೆಗೊಂಡಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!