Asian Games | ಪುರುಷರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಷ್ಯನ್ ಗೇಮ್ಸ್ ನಲ್ಲಿ ಚೀನಾ ವಿರುದ್ಧ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಬೆಳ್ಳಿ ಪದಕ ಗೆದ್ದಿದೆ.ಈ ವೇಳೆ ಕಾಂಟಿನೆಂಟಲ್ ಈವೆಂಟ್ ನಲ್ಲಿ ಭಾರತ ಬೆಳ್ಳಿ ಗೆದ್ದಿರುವುದು ಇದೇ ಮೊದಲು.

ಚೀನಾ ವಿರುದ್ಧ 3-2 ಅಂತರದಲ್ಲಿ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಸೋತಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.

ಮೊದಲ ಪಂದ್ಯದಲ್ಲಿ ಲಕ್ಷ್ಯ ಸೇನ್ 22-20, 14-21 ಮತ್ತು 21-18 ಅಂತರದಲ್ಲಿ ಶಿ ಯುಕಿ ವಿರುದ್ಧ ಜಯ ಸಾಧಿಸಿದರು. ನಂತರ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಭಾರತದ ಮುನ್ನಡೆಯನ್ನು ವಿಸ್ತರಿಸಿದರು. ಭಾರತದ ಜೋಡಿ ಚೀನಾದ ಲಿಯಾಂಗ್ ವೀಕೆಂಗ್-ವಾಂಗ್ ಚಾಂಗ್ ಜೋಡಿಯನ್ನು 21-15, 21-18 ನೇರ ಗೇಮ್ ಗಳಿಂದ ಸೋಲಿಸಿದರು.

ಬಳಿಕ ನಡೆದ ಸಿಂಗಲ್ಸ್​ನಲ್ಲಿ ಕಿಡಂಬಿ ಶ್ರೀಕಾಂತ್ 22-24, 9-21 ಅಂತರದಲ್ಲಿ ಲಿ ಶಿ ಫೆಂಗ್ ವಿರುದ್ಧ ಸೋತರು. ಎರಡನೇ ಡಬಲ್ಸ್ ಪಂದ್ಯದಲ್ಲಿ ಸಾಯಿ ಪ್ರತೀಕ್-ಧ್ರುವ್ ಕಪಿಲಾ ಜೋಡಿ 6-21, 15-21 ಅಂತರದಲ್ಲಿ ಸೋಲನುಭವಿಸಿದರು.

ಮಿಥುನ್ ಮಂಜುನಾಥ್ ಅಂತಿಯ ಸಿಂಗಲ್ಸ್​ ಹಣಾಹಣಿಯಲ್ಲಿ ವೆನ್ ಹಾಂಗ್ ಯಾನ್ ಅವರನ್ನು ಎದುರಿಸಿದರು ಆದರೆ ಚೀನಿ ಆಟಗಾರ ಪಾರಮ್ಯ ಮರೆದರು. ವೆನ್ ಹಾಂಗ್ ಯಾನ್ 21-12, 21-4 ಅಂತರದಲ್ಲಿ ಭಾರತದ ವಿರುದ್ಧ ಜಯ ಸಾಧಿಸಿದದರು.

ಸೆಮಿಫೈನಲ್​​ನಲ್ಲಿ ದಕ್ಷಿಣ ಕೊರಿಯಾವನ್ನು 3-2 ಗೋಲುಗಳಿಂದ ಸೋಲಿಸಿದ ನಂತರ ಭಾರತ ಫೈನಲ್​ಗೆ ಪ್ರವೇಶಿಸಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!