Wednesday, November 29, 2023

Latest Posts

Asian Games | ಶಾಟ್‌ಪುಟ್​ ನಲ್ಲಿ ಭಾರತಕ್ಕೆ ಬಂಗಾರ ಗೆದ್ದ ತಜಿಂದರ್‌ಪಾಲ್ ಸಿಂಗ್ ತೂರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಷ್ಯನ್ ಗೇಮ್ಸ್‌ನಲ್ಲಿ ಅವಿನಾಶ್ ಸೇಬಲ್ ಅವರು 3,000 ಮೀಟರ್ ಸ್ಟೀಪಲ್ ಚೇಸ್ ಅಲ್ಲಿ ಚಿನ್ನ ಗೆದ್ದ ಬೆನ್ನಲ್ಲೇ ಗುಂಡು ಎಸೆತದಲ್ಲಿ ತಜಿಂದರ್‌ಪಾಲ್ ಸಿಂಗ್ ತೂರ್ 20.36 ಮೀ ದೂರ ಎಸೆದು 13ನೇ ಚಿನ್ನ ಗೆದ್ದರು.

ಪುರುಷರ ಶಾಟ್‌ಪುಟ್ (ಗುಂಡು ಎಸೆತ) ಸ್ಪರ್ಧೆಯಲ್ಲಿ ತಜಿಂದರ್‌ಪಾಲ್ ಸಿಂಗ್ ತೂರ್ ಚಿನ್ನ ಗೆದ್ದಿದ್ದಾರೆ. ಇದರಿಂದಾಗಿ 2023ರ ಏಷ್ಯಾಡ್​ನಲ್ಲಿ ಭಾರತಕ್ಕೆ 13ನೇ ಚಿನ್ನದ ಪದಕ ಸಿಕ್ಕಂತಾಗಿದೆ.

ಭಾರತದ ಅಥ್ಲೀಟ್ ತಜಿಂದರ್‌ಪಾಲ್ ಸಿಂಗ್ ತೂರ್ 7.26 ಕೆಜಿ ಕಬ್ಬಿಣದ ಗುಂಡನ್ನು 20.36 ಮೀ ದೂರಕ್ಕೆಸೆದು ಸತತ ಎರಡನೇ ಏಷ್ಯಾಡ್ ಚಿನ್ನದ ಪದಕ ಗೆದ್ದರು. ಆರರಲ್ಲಿ ಮೂರು ಕ್ಲೀನ್ ಥ್ರೋಗಳನ್ನು ಮಾಡಿದರು. ಪ್ರತಿ ಮೂರು ಪ್ರಯತ್ನದಲ್ಲೂ ದೂರ ಹೆಚ್ಚಿಸಿದರು. ಆರಂಭದಲ್ಲಿ ಎರಡು ಫೌಲ್‌ ಮಾಡಿದರು. ಆದರೆ ಮೂರು, ನಾಲ್ಕು ಮತ್ತು ಆರನೇ ಎಸೆತಗಳು ಕ್ರಮವಾಗಿ 19.51 ಮೀ, 20.06 ಮತ್ತು 20.36 ಮೀ ದೂರ ದಾಖಲಿಸಿ ಗೆದ್ದರು.

ಪುರುಷರ ಶಾಟ್‌ಪುಟ್‌ ಫೈನಲ್‌ನಲ್ಲಿ ಸೌದಿ ಅರೇಬಿಯಾದ ಮೊಹಮದ್‌ ದೌಡಾ ಟೊಲೊ ಬೆಳ್ಳಿ ಗೆದ್ದರೆ, ಚೀನಾದ ಲಿಯು ಯಾಂಗ್‌ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಬಾಕ್ಸರ್‌ ನಿಖತ್ ಜರೀನ್‌ಗೆ ಕಂಚು

ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ನಿಖತ್ ಜರೀನ್ 2023ರ ಏಷ್ಯಾಡ್​ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಭಾರತದ ಬಾಕ್ಸರ್ ಮಹಿಳೆಯರ 50 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಚುತಮತ್ ರಕ್ಸತ್ ವಿರುದ್ಧ 3:2 ಪಾಯಿಂಟ್‌ಗಳಿಂದ ಸೋಲನುಭವಿಸಿದರು. ಥಾಯ್ ಬಾಕ್ಸರ್ ಚುತಮತ್ ರಕ್ಸತ್ ಮೊದಲ ಸುತ್ತಿನಲ್ಲಿ ಕಡಿಮೆ ಅಂಕ ಪಡೆದರಾದರೂ ಕಮ್​ಬ್ಯಾಕ್​ ಮಾಡಿ ಅಂತಿಮ ಎರಡು ಸುತ್ತುಗಳಲ್ಲಿ ಹೋರಾಡಿ ಗೆದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!