Asian Games | ಕ್ರಿಕೆಟ್​ ಫೈನಲ್​ ಪಂದ್ಯಕ್ಕೆ ವರುಣನ ಎಂಟ್ರಿ: ಟೀಮ್ ಇಂಡಿಯಾಗೆ ಒಲಿದ ಚಿನ್ನದ ಪದಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯನ್ ಗೇಮ್ಸ್​ ನಲ್ಲಿ ಭಾರತ – ಅಫ್ಘಾನಿಸ್ತಾನ್ ನಡುವಣ ಕ್ರಿಕೆಟ್​ ಫೈನಲ್​ ಪಂದ್ಯಕ್ಕೆ ವರುಣ ಎಂಟ್ರಿಕೊಟ್ಟಿದ್ದು, ಈ ಹಿನ್ನೆಲೆ ಪಂದ್ಯ ರದ್ದಾಗಿದ್ದು, ಟೂರ್ನಿಯುದ್ದಕೂ ಉತ್ತಮ ಪ್ರದರ್ಶನದೊಂದಿಗೆ ಫೈನಲ್​ಗೆ ಪ್ರವೇಶಿಸಿದ ಟೀಮ್ ಇಂಡಿಯಾಗೆ ಚಿನ್ನದ ಪದಕ ಒಲಿದಿದೆ.

ಇನ್ನು ಅಫ್ಘಾನಿಸ್ತಾನ್ ಬೆಳ್ಳಿ ಪದಕ ಗೆದ್ದರೆ, ಬಾಂಗ್ಲಾದೇಶ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ 18.2 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 112 ರನ್​ ಕಲೆಹಾಕಿದಾಗ ಮಳೆ ಬರಲಾರಂಭಿಸಿತು.

ಧಾರಾಕಾರ ಸುರಿದ ಮಳೆಯಿಂದ ಮೈದಾನವು ಸಂಪೂರ್ಣ ಒದ್ದೆಯಾಗಿದ್ದು, ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್​ಗಳು ನಿರ್ಧರಿಸಿದರು.

ಇದಾಗ್ಯೂ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ಟೀಮ್ ಇಂಡಿಯಾವನ್ನು ವಿಜಯಿ ಎಂದು ಘೋಷಿಸಲಾಯಿತು. ಈ ಮೂಲಕ ಏಷ್ಯನ್ ಗೇಮ್ಸ್​ ಕ್ರಿಕೆಟ್​ನಲ್ಲಿ ಭಾರತ ತಂಡವು ಸ್ವರ್ಣ ಪದಕವನ್ನು ಗೆದ್ದುಕೊಂಡಿದೆ. ಇನ್ನು ರನ್ನರ್ ಅಪ್ ತಂಡ ಅಫ್ಘಾನಿಸ್ತಾನ್ ತಂಡವು ಬೆಳ್ಳಿ ಪದಕಕ್ಕೆ ಕೊರೊಳೊಡ್ಡಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!