CAMEL MILK | ಗುಜರಾತ್‌ನಲ್ಲಿ ಏಷ್ಯಾದ ಮೊದಲ ಒಂಟೆ ಹಾಲು ಸಂಸ್ಕರಣಾ ಘಟಕ ಆರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್‌ನ ಕಛ್‌ನಲ್ಲಿ ಏಷ್ಯಾದ ಮೊದಲ ಡಿಯೋಡರೈಸ್ಡ್ (ವಾಸನೆಮುಕ್ತ) ಒಂಟೆ ಹಾಲು ಸಂಸ್ಕರಣಾ ಘಟಕಾ ಆರಂಭವಾಗಿದೆ. ಅಮುಲ್ ಕಂಪನಿಯ ಸಂಸ್ಕರಣಾ ಘಟಕ ಇದಾಗಿದ್ದು, ಒಂಟೆ ಹಾಲಿನ ಡಿಮ್ಯಾಂಡ್ ಬಗ್ಗೆ ಅವಲೋಕಿಸಿದ ಕಂಪನಿ ಗುಜರಾತ್‌ನ ಕಛ್‌ನ ಚಂದ್ರನಿ ಗ್ರಾಮದಲ್ಲಿ ತನ್ನ ಸಂಸ್ಕರಣ ಘಟಕ ಆರಂಭಿಸಿದೆ.

ಒಂಟೆ ಸಾಕಣಿಕೆದಾರರಿಗೆ ಆರ್ಥಿಕ ಸಮಸ್ಯೆ ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿಂದೆ ಪ್ರತಿ ಲೀಟರ್‌ಗೆ 20 ರೂಪಾಯಿ ಇದ್ದ ಹಾಲಿನ ಬೆಲೆ ಇದೀಗ 51 ರೂಪಾಯಿಗೆ ಏರಿಕೆಯಾಗಿದೆ. ಒಂಟೆ ಸಾಕುದಾರರಿಗೆ ಆದಾಯದ ಹಾದಿ ಸುಗಮವಾಗಿದೆ.

ದುಬೈ ಮತ್ತು ಪಾಕಿಸ್ತಾನದಲ್ಲಿ ಮಾತ್ರ ಒಂಟೆ ಹಾಲು ಸಂಸ್ಕರಿಸುವ ಕೇಂದ್ರಗಳಿವೆ. ಇದೀಗ ಗುಜರಾತ್‌ನಲ್ಲಿ ಕೇಂದ್ರ ಆರಂಭವಾಗಿದ್ದು, ಒಂಟೆ ಸಾಕಣೆದಾರರಿಗೆ ಸಂತಸ ತಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!